ಇಬ್ಬರು ಗೋ ಕಳ್ಳರ ಬಂಧನ

sinon
ಸೀನಾನ್
Published on

ಗಂಗೊಳ್ಳಿ: ಗಂಗೊಳ್ಳಿ ಸಮೀಪದ ಗುಜ್ಜಾಡಿ ಗ್ರಾಮದ ನಾಯಕವಾಡಿ ಎಂಬಲ್ಲಿ ಗುರುವಾರ ಬೆಳಗಿನ ಜಾವ ಜಾನುವಾರು ಕಳ್ಳತನ ನಡೆಸಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.

ಗುಲ್ವಾಡಿ ಗ್ರಾಮದ ಕಾಂಡ್ಲಾಗದ್ದೆ ಮನೆ ನಿವಾಸಿ ಮೊಹಮ್ಮದ್ ಸೀನಾನ್(19) ಹಾಗೂ ನೇರಳಕಟ್ಟೆ ನಿವಾಸಿ ಅಪ್ರಾಪ್ತ ಬಾಲಕ ಬಂಧಿತರು. ನಾಯಕವಾಡಿಯಲ್ಲಿರುವ ರಾಮ ದೇವಸ್ಥಾನದ ಸಮೀಪದ ರಸ್ತೆಯಲ್ಲಿ ಮಲಗಿದ್ದ ಜಾನುವಾರುಗಳನ್ನು ಇಬ್ಬರು ಹಿಡಿದು ಬಲವಂತವಾಗಿ ಎಳೆದುಕೊಂಡು ಹೋಗುತ್ತಿದ್ದರು. ಇದನ್ನು ನೋಡಿದ ಡಿಎಆರ್ ಸ್ಟ್ರೈಕಿಂಕ್ ಪೋರ್ಸ್ ಸಿಬ್ಬಂದಿ ಅವರತ್ತ ಧಾವಿಸಿದಾಗ ಕಳ್ಳರು ಜಾನುವಾರುಗಳನ್ನು ಮತ್ತು ಕಾರನ್ನು ಬಿಟ್ಟು ಪರಾರಿಯಾಗಿದ್ದರು. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಹರೀಶ್ ಆರ್. ಮತ್ತು ಬಸವರಾಜ್ ಕನಶೆಟ್ಟಿ ಹಾಗೂ ಸಿಬ್ಬಂದಿ ರಾಜು ನಾಯ್ಕ, ಶಾಂತಾರಾಮ ಶೆಟ್ಟಿ, ರಾಘವೇಂದ್ರ ಪೂಜಾರಿ, ಸಂದೀಪ ಕುರಾಣಿ ಮತ್ತು ದಿನೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net