ಇಬ್ಬರು ಗೋಕಳ್ಳರ ಬಂಧನ

bnk cow
ಪೊಲೀಸರು ವಶಪಡಿಸಿಕೊಂಡ ಜಾನುವಾರುಗಳು.
Published on

ಬಣಕಲ್: ಮಂಗಳೂರು ಕಡೆಗೆ ಬಿಡಾಡಿ ದನಗಳನ್ನು ಅಕ್ರಮವಾಗಿ ಶನಿವಾರ ಸಾಗಿಸುತ್ತಿದ್ದ ಮಂಗಳೂರು ಮೂಲದ ಇಬ್ಬರು ಆರೋಪಿಗಳನ್ನು ಬಣಕಲ್ ಪೊಲೀಸರು ಬಂಧಿಸಿ, 7 ಜಾನುವಾರುಗಳನ್ನು ರಕ್ಷಿಸಿ, ವಾಹನ ವಶಕ್ಕೆ ಪಡೆದಿದ್ದಾರೆ.

ಪುತ್ತಿಗೆ ಗ್ರಾಮದ ಮಹಮ್ಮದ್ ಆರೀಪ್, ಬಜ್ಪೆ ಗ್ರಾಮದ ಮಹಮ್ಮದ್ ಸಾನ್ ಬಂಧಿತ ಆರೋಪಿಗಳು. ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಣಕಲ್, ಬಾಳೂರು, ಕೊಟ್ಟಿಗೆಹಾರ ಸುತ್ತಮುತ್ತ ಬಿಡಾಡಿ ಜಾನುವಾರುಗಳ ಅಕ್ರಮ ಸಾಗಣೆ ಹೆಚ್ಚಾಗಿದೆ. ಗೋಕಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸಂಜಯಗೌಡ ಕೊಟ್ಟಿಗೆಹಾರ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net