ಇಬ್ಬರು ಆರೋಪಿಗಳ ಬಂಧನ

IMG20250125213539.jpg
Published on

ಬೆಳಗಾವಿ: ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿ, 7.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.

ನ್ಯೂ ಗಾಂಧಿ ನಗರದ ಫರ್ಹಾನ್ ರಿಯಾಜಅಹ್ಮದ ದಾಲಾಯತ್ (22), ನೂರಾನಿ ಮಸೀದಿ ಬಳಿಯ ಉಜ್ವಲ ನಗರ 8ನೇ ಕ್ರಾಸ್ ನಿವಾಸಿ ಜುಬೇರಹ್ಮದ ಅಬ್ದುಲರಶೀದ ದಾಲಾಯತ್ (25) ಬಂಧಿತರು. ಈ ಆರೋಪಿಗಳು ಅಮನ್ ನಗರದಲ್ಲಿ ಜ.19ರಂದು ರಾತ್ರಿ ಮನೆಯಲ್ಲಿ ಕಳ್ಳತನ ಮಾಡಿದ್ದರು. ಫರ್ಹಾನ್‌ನು ಈ ಮೊದಲು ಕಳ್ಳತನ ಪ್ರಕರಣ, ಗಾಂಜಾ ಸೇವನೆ ಭಾಗಿಯಾಗಿದ್ದ. ಜುಬೇರ ಅಹ್ಮದ ಕೂಡ 2021ರಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದನು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net