ಮೂವರು ರೌಡಿಗಳ ಬಂಧನ

arrest
Published on

ಹುಬ್ಬಳ್ಳಿ: ಯುವಕನ ಮೇಲೆ ಹಲ್ಲೆ ನಡೆಸಿದ ಮೂವರು ಪುಡಿ ರೌಡಿಗಳನ್ನು ವಿದ್ಯಾನಗರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಹಳೇ ಹುಬ್ಬಳ್ಳಿಯ ಗುರುನಾಥ ನಗರದ ನಿವಾಸಿ ವಿವಿನ್ ರಿಚರ್ಡ್ ಎಂಬುವವರ ಮೇಲೆ ಸೆಟ್ಲಮೆಂಟ್‌ನ ವಿಜಯ ಬಿಜವಾಡ, ವಿನಾಯಕ ಅಥಣಿ ಹಾಗೂ ವೀರಾಪುರ ಓಣಿಯ ಪವನ ನೂಲ್ವಿ ಹಲ್ಲೆ ಮಾಡಿದ್ದರು. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಮವಾರ ರಾತ್ರಿ ವಿದ್ಯಾನಗರದ ಹೋಟೆಲ್‌ವೊಂದರಲ್ಲಿ ಊಟ ಮಾಡಲು ಹೋದಾಗ ವಿವಿನ್ ಹಾಗೂ ಮೂವರ ನಡುವೆ ಜಗಳವಾಗಿತ್ತು, ಮೂವರೂ ವಿವಿನ್ ಮೇಲೆ ಹಲ್ಲೆ ನಡೆಸಿ, ಕಾರಿನಲ್ಲಿ ಕರೆದೊಯ್ದು ಅಜ್ಞಾತ ಸ್ಥಳದಲ್ಲಿ ಕೂಡಿ ಹಾಕಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net