ಚಿನ್ನದ ಆಸೆ ತೋರಿಸಿ ವಂಚಿಸಿದ್ದ ಮೂವರ ಬಂಧನ

Published on

ಕೊರಟಗೆರೆ: ಕಡಿಮೆ ಬೆಲೆಗೆ ಚಿನ್ನ ನೀಡುವ ಆಸೆ ತೋರಿಸಿ ಆಂಧ್ರಪ್ರದೇಶದ ಗುತ್ತಿ ಗ್ರಾಮದ ಶಾಶಾವಲಿ ಎಂಬಾತನಿಗೆ ವಂಚನೆ ಮಾಡಿ ಪರಾರಿಯಾಗಿದ್ದ ಹಕ್ಕಿಪಿಕ್ಕಿ ಕಾಲನಿಯ ಮೂವರನ್ನು ಬಂಧಿಸಿ ಲಾಂತರ ರೂ. ನಗದು ಮತ್ತು ವಾಹನಗಳನ್ನು ಕೊರಟಗೆರೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂ ವ್ಯಾಪ್ತಿಯ ಹಕ್ಕಿಪಿಕ್ಕಿ ಕಾಲನಿಯ ಯುವರಾಜ(22), ಕನ್ನೇಶ(45), ರಾಜುಬಾಬು(34) ಬಂಧಿತರು. ಇನ್ನೂರ್ವ ಸಂದೀಲ್​(36)ಎಂಬ ಆರೋಪಿಗಾಗಿ ಶೋಧಕಾರ್ಯ ಮುಂದುವರಿದಿದೆ. ಬಂಧಿತರಿಂದ ದ್ವಿಚಕ್ರ ವಾಹನ ಮತ್ತು 5.50 ಲ ರೂ. ನಗದು ವಶಕ್ಕೆ ಪಡೆದಿದ್ದಾರೆ. ತುಮಕೂರು ಜಿಲ್ಲಾ ಎಸ್ಪಿ ಅಶೋಕ್​, ಕೆ.ವೆಂಕಟ್​, ಹೆಚ್ಚುವರಿ ಎಸ್ಪಿ ಮರಿಯಪ್ಪ ಮತ್ತು ಅಬ್ದುಲ್​ ಖಾದರ್​ ಹಾಗೂ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ಅವರ ಮಾರ್ಗದರ್ಶನದಲ್ಲಿ ಕೊರಟಗೆರೆ ಸಿಪಿಐ ಆರ್​.ಪಿ.ಅನಿಲ್​ ನೇತೃತ್ವದಲ್ಲಿ ಪಿಎಸ್​ಐ ಚೇತನಗೌಡ ತಂಡದಿಂದ ಆರೋಪಿ ಪತ್ತೆ ಹಚ್ಚಲಾಗಿದ್ದು, ಕೊರಟಗೆರೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಟನೆ: ಸೆ.28ರಂದು ಎರಡು ಗೋಲ್ಡ್​ ಕಾಯಿನ್​ಗಳನ್ನು ತೋರಿಸಿದ್ದ ಖದೀಮರು, ನಮಗೆ ನಿಧಿ ಸಿಕ್ಕಿದ್ದು, ಇದೇ ರೀತಿಯ ಒಂದು ಮೂಟೆಯಷ್ಟು ಕಾಯಿನ್​ ಇವೆ. ಇದನ್ನು ನಾವು ಮಾರಾಟ ಮಾಡಲು ಆಗುತ್ತಿಲ್ಲ. ಇದನ್ನು ನಿಮಗೆ ಕೊಡುತ್ತೇವೆ "
ನಮಗೆ ಇಷ್ಟು ಹಣ ಕೊಡಿ ಎಂದು ಕಥೆ ಕಟ್ಟಿದ್ದಾರೆ. ಇದನ್ನು ನಂಬಿದ ಆಂಧ್ರಪ್ರದೇಶದ ಗುತ್ತಿಗ್ರಾಮದ
ಶಾಶಾವಲಿ ಆರೋಪಿಗಳಿಂದ ಪಡೆದ ಎರಡು ಕಾಯಿನ್​ ಚೆಕ್​ ಮಾಡಿಸಿ ಅಸಲಿ ಎಂದು ಖಾತ್ರಿಪಡಿಸಿಕೊಂಡ ನಂತರ ಆರೋಪಿಗಳು ಒಂದು ಮೂಟೆಯಲ್ಲಿ ಹಿತ್ತಾಳೆ ಕಾಯಿನ್​ಗಳನ್ನು
ಇಟ್ಟುಕೊಂಡು ಕುಂಕುಮ ಹಾಕಿ ಅಸಲಿ ಎಂಬಂತೆ ಬಿಂಬಿಸಿ ಮೂಟೆ ನೀಡಿ ಹಣ ಪಡೆದು ಹೋಗಿದ್ದಾರೆ. ಮನೆಗೆ ಹೋಗಿ ಪರಿಶೀಲಿಸಿದಾಗ ಅಸಲಿಯಲ್ಲ ನಕಲಿ ಎಂದು ಗೊತ್ತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net