ದೇವರ ವಿಗ್ರಹ ಕದ್ದವರ ಸೆರೆ

11
ನೆಲಮಂಗಲದ ಬಸವನಹಳ್ಳಿ ಇತಿಹಾಸ ಪ್ರಸಿದ್ಧ ಶ್ರೀ ಶಮಿಗಿರಿ ಕ್ಷೇತ್ರ ಶ್ರೀ ಲ್ಮ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ದೇವರ ವಿಗ್ರಹ ಕಳವು ಮಾಡಿದ್ದ ಆರೋಪಿಯೊದಿಗೆ ಸ್ಥಳ ಮಹಜರು ಮಾಡಿದರು. ಠಾಣೆ ಆರಕ್ಷಕ ನಿರೀಕ್ಷಕ ಭರತ್​ಗೌಡ , ಎಸ್​ಐ ನಂಜಯ್ಯ, ಎಎಸ್​ಐ ಬಿ.ಎಸ್​.ರು, ಸಿಬ್ಬಂದಿ ಪಠಾಣ್​, ಬಸವರಾಜು, ಹರೀಶ್​ ಇದ್ದರು.
Published on

ನೆಲಮಂಗಲ: ನಗರಸಭೆ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದ ಶಮಿಗಿರಿ ಕ್ಷೇತ್ರ ಶ್ರೀ ಲ್ಮ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ದೇವರ ವಿಗ್ರಹ ಕದ್ದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂದಿಸಿರುವ ನಗರ ಪೊಲೀಸ್​ ಠಾಣೆ ಪೊಲೀಸರು 2 ಲಕ್ಷ ರೂ. ಮೌಲ್ಯದ ದೇವರ ವಿಗ್ರಹಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ಓಬನಾಯಕನಹಳ್ಳಿ ಗ್ರಾಮದ ನಿವಾಸಿ ಬಾದ್​ಷಾಖಾನ್​ (20), ಸೋಹಿದುಲ್​ ಶೇಖ್​ (23 ) ಬಂಧಿತರು. ಜ.26ರಂದು ನಗರಸಭೆ ವ್ಯಾಪ್ತಿಯ ಬಸವನಹಳ್ಳಿಯ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ದೇವರ ವಿಗ್ರಹ ಕದ್ದು ಪರಾರಿಯಾಗಿದ್ದರು. ಈ ಕುರಿತು ದೂರು ದಾಖಲಿಸಿಕೊಂಡ ನಗರ ಪೊಲೀಸ್​ ಠಾಣೆ ಆರಕ್ಷಕ ನಿರೀಕ್ಷಕ ಭರತ್​ಗೌಡ ನೇತೃತ್ವದ ಪೊಲೀಸ್​ ಸಿಬ್ಬಂದಿ ಜ.27ರಂದು ಆರೋಪಿಗಳು ವಿಶ್ವೇಶ್ವರಪುರದ ಬಳಿ ಚಿಂದಿ ಆಯುತ್ತಿದ್ದ ವೇಳೆ ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣೆ ನಡೆಸಿದಾಗ ವಿಗ್ರಹ ಕಳ್ಳತನ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಪೋಲೀಸರು ಬಂಧಿತರಿಂದ 2 ಲಕ್ಷ ರೂ. ಬೆಲೆಬಾಳುವ ದೇವರ ವಿಗ್ರಹ ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net