ತಾಮ್ರದ ವಸ್ತುಗಳನ್ನು ಕಳವು ಮಾಡಿದ್ದವರ ಬಂಧನ

arrested
Published on

ಮೈಸೂರು: ಗುಜರಿಯಲ್ಲಿ ತಾಮ್ರದ ವಸ್ತುಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ನರಸಿಂಹರಾಜ ಠಾಣೆ ಪೊಲೀಸರು, 3.60 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಶ್ರೀಬೀರೇಶ್ವರ ಎಂಟರ್ ಪ್ರೈಸಸ್ ಹೆಸರಿನ ಗುಜರಿಯಲ್ಲಿ ಕಳೆದ ಡಿ.26ರಂದು ರಾತ್ರಿ ತಾಮ್ರದ ಹಳೇ ವಸ್ತುಗಳು, ಕ್ಯಾಷ್ ಬಾಕ್ಸ್‌ನಲ್ಲಿಟ್ಟಿದ್ದ ಹಣ ಕಳ್ಳತನವಾಗಿದೆ ಎಂದು ಮಾಲೀಕರು ನರಸಿಂಹರಾಜ(ಎನ್.ಆರ್.) ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಅನುಮಾನದ ಮೇಲೆ ಹಳೇ ಕಳ್ಳನನ್ನು ಜ.3ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಬಳಿಕ ಈತ ನೀಡಿದ ಮಾಹಿತಿ ಆಧರಿಸಿ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿಯನ್ನು ಬಂಧಿಸಿ 3.60 ಲಕ್ಷ ರೂ. ಮೌಲ್ಯದ 558 ಕೆ.ಜಿ.ತೂಕದ ತಾಮ್ರದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net