ಪೊಲೀಸರ ಮೇಲೆ ಹಲ್ಲೆ ಮಾಡಿದ್ದವರ ಬಂಧನ

crime
Published on

ಹುಬ್ಬಳ್ಳಿ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದುಕೊಂಡು ಹೋಗುತ್ತಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಇಬ್ಬರನ್ನು ಬಂಧಿಸಲಾಗಿದೆ.

ಪ್ರಶಾಂತ ನಾಗಪ್ಪನವರ, ಕಾರ್ತಿಕ ಮಾಕಾಪುರ ಬಂಧಿತರು. ಹಳೇಹುಬ್ಬಳ್ಳಿ ಪ್ರಕರಣದಡಿ ಇಬ್ಬರನ್ನು ವಶಕ್ಕೆ ಪಡೆದು ಗೋಪನಕೊಪ್ಪದಿಂದ ಕರೆದುಕೊಂಡು ಹೋಗುವಾಗ ಹೆಗ್ಗೇರಿ ಸ್ಮಶಾನ ಗಟ್ಟಿ ಹತ್ತಿರ ಪೊಲೀಸ್ ಸಿಬ್ಬಂದಿ ರಮೇಶ ಎಂಬುವವರ ಮೇಲೆ ಮಾಡಿದ್ದರು. ಕರ್ತವ್ಯಕ್ಕೆ ಅಡ್ಡಿ ಪಡಿಸಿದಲ್ಲದೆ, ತಪ್ಪಸಿಕೊಳ್ಳಲು ಯತ್ನಿಸಿದ್ದರು ಎನ್ನಲಾಗಿದೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಆರೋಪಿಗಳು ಕಾರವಾರ ರಸ್ತೆಯ ಬಾರೊಂದರ ಹತ್ತಿರ ಮದ್ಯದ ವಿಚಾರವಾಗಿ ಗಲಾಟೆ ಮಾಡಿ ಗಣೇಶ ಎಂಬಾತನಿಗೆ ಚಾಕುವಿನಿಂದ ಇರಿಯಲು ಮುಂದಾಗಿದ್ದರು. ಈ ಕುರಿತು ಕೂಡ ಪ್ರಕರಣ ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net