ಗಾಂಜಾ ಮಾರುತ್ತಿದ್ದವರ ಬಂಧನ

18 vpt 2.3
Published on

ಕೊಡಗು : ವಿರಾಜಪೇಟೆ ಸಮೀಪದ ಪೆರಂಬಾಡಿಯ ನವನಗರದ ಬಸ್ ನಿಲ್ದಾಣದಲ್ಲಿ ಮಾದಕ ವಸ್ತು ಮಾರಾಟ ಮತ್ತು ಸರಬರಾಜು ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ದಾಳಿ ನಡೆಸಿ, 2.378 ಕೆಜಿ ಗಾಂಜಾದೊಂದಿಗೆ ಆರೋಪಿಗಳನ್ನು ಬಂಧಿಸಿದ್ದಾರೆ.
ಎಡಪಾಲ ಗ್ರಾಮದ ನಿವಾಸಿ ಸಿ.ವೈ.ಇಸಾಕ್ (34), ಎಂ.ಜಿ.ನಂದಕುಮಾರ (45) ಬಂಧಿತರು. ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ವಿರಾಜಪೇಟೆ ಡಿವೈಎಸ್ಪಿ ಆರ್.ಮೋಹನ್‌ಕುಮಾರ್ ಅವರ ನಿರ್ದೇಶನದಂತೆ ವೃತ್ತನಿರೀಕ್ಷಕ ಶಿವರುದ್ರ, ನಗರ ಪೊಲೀಸ್ ಉಪನಿರೀಕ್ಷಕ ರವೀಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net