ಖೋಟಾನೋಟು ಚಲಾವಣೆ ಮಾಡಿದ್ದವರ ಬಂಧನ

Published on

ಗಂಗಾವತಿ: ನಗರದ ಬಾರ್‌ವೊಂದರಲ್ಲಿ ಖೋಟಾನೋಟು ಚಲಾವಣೆ ಮಾಡಿದ್ದ ಐವರನ್ನು ನಗರ ಪೊಲೀಸರು ಭಾನುವಾರ ಬಂಧಿಸಿದ್ದು, ನ್ಯಾಯಾಂಗಕ್ಕೆ ಬಂಧನಕ್ಕೆ ಒಪ್ಪಿಸಿದ್ದಾರೆ.

ಹೊಸಪೇಟೆಯ ಖಲಂದರಖಾನ್ ಅಬ್ದುಲ್ ಹಫೀಜ್, ಸಂಡೂರಿನ ಬಿ.ನೂರಮುಸ್ತ್ ಖಾಜಾ ಅಮೀನ್‌ಸಾಬ್, ಗಜೇಂದ್ರಗಡದ ವೀರೇಶ ನಾರಾಯಣಪ್ಪ ಸಿಲವೇರಿ, ಕೆರೂರಿನ ಸರ್‌ರಾಜ್ ಮಹ್ಮದ್ ಕಲಾದಗಿ ಇಕ್ಬಾಲ್‌ಸಾಬ್ ಮತ್ತು ಬಿಂಕದಕಟ್ಟೆಯ ಅಬ್ದುಲ್ ರಜಾಕ್ ಹುಸೇನ್‌ನದ್ಾ ಪ್ರಕರಣದ ಆರೋಪಿಗಳು. ನಗರ ಬಾರ್‌ವೊಂದರಲ್ಲಿ ಮದ್ಯ ಕುಡಿದಿದ್ದು, ಬಿಲ್ ಪಾವತಿಸುವಾಗ ಖೋಟಾನೋಟುಗಳನ್ನು ನೀಡಿದ್ದರು. ಅನುಮಾನಿಸಿದ ಬಾರ್ ಸಿಬ್ಬಂದಿ, ಪೊಲೀಸರ ಗಮನಕ್ಕೆ ತಂದಿದ್ದರು.

ವಿಚಾರಣೆಗೊಳಪಡಿಸಿದಾಗ ಖೋಟಾನೋಟು ಚಲಾವಣೆ ಗೊತ್ತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ 78,500 ರೂ. ಮೌಲ್ಯದ 500 ಮುಖಬೆಲೆಯ 157 ಖೋಟಾ ನೋಟುಗಳು, 36,500ರೂ. ನಗದು, ಮಹಿಂದ್ರಾ ಕಾರು, ಪಲ್ಸರ್ ಬೈಕ್ ಮತ್ತು ಐದು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net