

ಹುಬ್ಬಳ್ಳಿ: ಮಾರಕಾಸ್ತ್ರ ಹೊಂದಿದ್ದ ನಾಲ್ವರನ್ನು ಬಂಧಿಸುವಲ್ಲಿ ಇಲ್ಲಿಯ ಕಸಬಾಪೇಟ ಠಾಣೆ ಪೊಲೀಸರು ಶನಿವಾರ ಯಶಸ್ವಿಯಾಗಿದ್ದಾರೆ.
ಕಟಗರ ಓಣಿಯ ಮಹಮ್ಮದಸಾಧಿಕ ಬಾಬಾಸಾಧಿಕ ಬೇಪಾರಿ (28), ದಾದಾಪೀರ ಚೌಧರಿ (28), ಕೋಳೆಕರ ಪ್ಲಾಟ್‌ನ ಆಸೀಫ ಹಜರತಬಿಲಾಲ ಬೇಪಾರಿ (26), ಬುಲ್ಡೋಜರ ನಗರದ ಮೋಹಿನಖಾನ ಧಾರವಾಡ (24) ಬಂಧಿತರು.
ಹಳೇಹುಬ್ಬಳ್ಳಿಯ ಗೌಸಿಯಾಟೌನ್ ಗಾರ್ಡನ್ ಹತ್ತಿರ ಅಪರಾಧ ಮಾಡುವ ಉದ್ದೇಶದಿಂದ ತಲವಾರ ಹಿಡಿದು ನಿಂತಿರುವ ಗ್ಗೆ ಮಾಹಿತಿ ಕಲೆಹಾಕಿದ ಪಿಐ ರಾಘವೇಂದ್ರ ಹಳ್ಳೂರ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ಮೂಲಕ ದಾಳಿ ನಡೆಸಿ ಬಂಧಿಸಿದೆ. ಕಸಬಾಪೇಟ್ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.