

ಜೊಯಿಡಾ: ಜಿಂಕೆ ಮಾಂಸ ಬೇಟೆಯಾಡಿ, ಬೇಯಿಸುತ್ತಿದ್ದ ಇಬ್ಬರನ್ನು ಕಾಳಿ ಸಂರಕ್ಷಿತ ಅಭಯಾರಣ್ಯದ ಅಧಿಕಾರಿಗಳು ಬಂಧಿಸಿದ್ದಾರೆ.
ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಗುಂದ ಅರಣ್ಯದ ಯರಮುಖದ ಮನೆಯ ಶೆಡ್ಡಿನಲ್ಲಿ ಜಿಂಕೆ ಮಾಂಸದ ತುಂಡುಗಳನ್ನು ಕಾಯಿಸುತ್ತಿರುವಾಗ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ್ದರು.
ನಂದಿಗದ್ದಾ ಗ್ರಾಪಂ ವ್ಯಾಪ್ತಿಯ ಮಹದೇವ ದಬಗಾರ, ಅನಂತ ಎಲ್ಲೆಕರ ಈ ಆರೋಪಿಗಳನ್ನು ಬಂದಿಸಲಾಗಿದೆ. ನಾರಾಯಣ ಎಸ್ ದಬಗಾರ ಮತ್ತು ದೀಪಕ ವಸಂತ ನಾಯ್ಕ ತಪ್ಪಿಸಿಕೊಂಡಿದ್ದಾರೆ.
4.4 ಕೆ.ಜಿ ಜಿಂಕೆ ಮಾಂಸ, ಬಕೆಟ್ , ಮತ್ತು ಒಣಗಿಸಲು ಬಳಸಿದ ಅಡಿಕೆ ಕಂಬಿಯನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ನಿಲೇಶ ಶಿಂಧೆ, ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಎಂ. ಎಸ್ ಕಳ್ಳಿಮಠ ಅವರ ಮಾರ್ಗದರ್ಶನದಲ್ಲಿ ಗುಂದ ಆರ್‌ಎಫ್‌ಒ ನೀಲಕಂಠ ದೇಸಾಯಿ ಗುಂದ ವಲಯದ ಡಿಆರ್ ಎಫ್‌ಒ ಶರತ ಐಹೊಳ್ಳಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.