ಎಟಿಎಂ ಕಾರ್ಡ್ ಕಸಿದು ಹಣ ದೋಚಿದ್ದವನ ಬಂಧನ

Arrest Kaidhi
Published on

ಕಲಘಟಗಿ: ಪಟ್ಟಣದಲ್ಲಿ ಇತ್ತೀಚಿಗೆ ಎಟಿಎಂ ಕಾರ್ಡ್ ಕಸಿದುಕೊಂಡು ಹಣ ದೋಚಿ ಪರಾರಿಯಾಗಿದ್ದವನನ್ನು ಬಂಧಿಸುವಲ್ಲಿ ಕಲಘಟಗಿ ಪೊಲೀಸರು ಯಶಸ್ವಿಯಾಗಿದ್ದಾರೆ.


ಠಾಣೆಯ ಸಿಪಿಐ ಶ್ರೀಶೈಲ ಕೌಜಲಗಿ ಅವರ ನೇತೃತ್ವದ ತಂಡವು ಪ್ರಕರಣವನ್ನು ಬೇಧಿಸಿದ್ದು, ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ನಿವಾಸಿ ಆಸ್ಪಕ್ ತಳವಾಯಿ ಎಂಬಾತನನ್ನು ಬಂಧಿಸಿ, ಆತನಿಂದ 15000 ರೂ. ನಗದು ಹಾಗೂ ಒಂದು ಕಾರು ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net