ಪೊಲೀಸ್ ಮೇಲೆ ಹಲ್ಲೆ ಮಾಡಿದವನ ಬಂಧನ

Published on

ಯಳಂದೂರು : ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಕರ್ತವ್ಯ ನಿರತ ಪೊಲೀಸ್ ಹಾಗೂ ವಾಹನ ಚಾಲಕನ ಮೇಲೆ ಹಲ್ಲೆ ಮಾಡಿದವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಗ್ರಾಮದ ನಿಂಗರಾಜು ಬಂಧಿತ.

ಬಂದಿತ ನಿಂಗರಾಜು
ಬಂದಿತ ನಿಂಗರಾಜು

ಭಾನುವಾರ ರಾತ್ರಿ ಕೆಸ್ತೂರು ಗ್ರಾಮದ ನಿಂಗರಾಜು ಅವರ ಪತ್ನಿ ನೇತ್ರಾವತಿ ಎಂಬಾಕೆ ತನ್ನ ಗಂಡ ಕುಡಿದು ಗಲಾಟೆ ಮಾಡುತ್ತಿದ್ದಾನೆ ಎಂದು ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿದ್ದಾರೆ. ಕರೆ ಹಿನ್ನೆಲೆಯಲ್ಲಿ 112 ವಾಹನದಲ್ಲಿದ್ದ ಕಾನ್‌ಸ್ಟೆಬಲ್ ನಂಜುಂಡೇಗೌಡ ಹಾಗೂ ವಾಹನ ಚಾಲಕ ರಾಜಣ್ಣ ಗ್ರಾಮದ ನಿಂಗರಾಜು ಎಂಬುವವರ ಮನೆ ಬಳಿ ತೆರಳಿದ್ದಾರೆ. ಈ ವೇಳೆ ಕುಡಿದು ಗಲಾಟೆ ಮಾಡುತ್ತಿದ್ದ ನಿಂಗರಾಜುಗೆ ಬುದ್ಧಿವಾದ ಹೇಳಲು ಹೊರಟ ಸಂದರ್ಭದಲ್ಲಿ ಆತ ನಂಜುಂಡೇಗೌಡರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಇವರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಚಾಲಕ ರಾಜಣ್ಣ ಬಿಡಿಸಲು ಹೋದಾಗ ಅವರ ಬಟ್ಟೆಯನ್ನೂ ಹರಿದು ಹಾಕಿದ್ದಾನೆ. ಹಾಗಾಗಿ ಈತನ ವಿರುದ್ಧ ಸಿಬ್ಬಂದಿ ನಂಜುಂಡೇಗೌಡ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡಿರುವ ಪೊಲೀಸರು ನಿಂಗರಾಜು ಎಂಬಾತನನ್ನು ಸೋಮವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net