

ಹುಣಸೂರು: ತಾಲೂಕಿನ ಜಾಬಗೆರೆ ಮನೆ ಹಿತ್ತಲಿನಲ್ಲಿ ಗಾಂಜಾ ಗಿಡ ಬೆಳೆದಿದ್ದ ಮಾಲೀಕನನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗ್ರಾಮದ ಮನೆ ಮಾಲೀಕ ತಿಮ್ಮಪ್ಪ ನಾಯಕ ಬಂಧಿತ. ಈತನನ್ನು ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಠಾಣೆ ಪೊಲೀಸರು ಶನಿವಾರ ದಾಳಿ ನಡೆಸಿ 4.95 ಕೆಜಿ ಗಾಂಜಾ ಗಿಡವನ್ನು ವಶಕ್ಕೆ ಪಡೆದರು.
ಕಾರ್ಯಾಚರಣೆಯಲ್ಲಿ ಡಿವೈಎಸ್ ಪಿ.ಗೋಪಾಲಕೃಷ್ಣ, ಇನ್‌ಸ್ಪೆಕ್ಟರ್ ಮುನಿಯಪ್ಪ, ಜಾಬಗೆರೆ ಗ್ರಾಮ ಪಂಚಾಯಿತಿ ಬಿಲ್‌ಕಲೆಕ್ಟರ್ ಮಂಜು, ಜಾಬಗೆರೆ ವೃತ್ತದ ಗ್ರಾಮಲೆಕ್ಕಿಗ ಸಿದ್ದರಾಮ ಎಳಸಂಗಿ ಹಾಗೂ ಪೊಲೀಸ್ ಸಿಬ್ಬಂದಿ ವಿ.ಜೆ.ಮಂಜುನಾಥ, ರೇವಣ್ಣ, ಇಮ್ರಾನ್ ಷರೀಫ್, ನಂದೀಶ್, ನಾರಾಯಣ ಶೆಟ್ಟಿ, ಚಾಲಕ ಸುಂದರ್ ರಾಜ ಪಾಲ್ಗೊಂಡಿದ್ದರು.