ಹಲ್ಲೆ ಮಾಡಿ ಪರಾರಿಯಾಗಿದ್ದವನ ಬಂಧನ

accused Subrahmanya
Published on

ಕುಮಟಾ: ಹೋಟೆಲ್​ನಲ್ಲಿ ಕಾರ್ವಿುಕನನ್ನು ಬೆದರಿಸಿ ಹಲ್ಲೆ ಮಾಡಿ ಹಣ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಕುಮಟಾ ಪೊಲೀಸರು ತ್ವರಿತವಾಗಿ ಪತ್ತೆ ಮಾಡಿ ಬಂಧಿಸಿದ್ದಾರೆ.

ಶಿವಮೊಗ್ಗಾದ ತೀರ್ಥಹಳ್ಳಿ ತಾಲೂಕಿನ ಕಮ್ಮರಡಿ ನಿವಾಸಿ ಸುಬ್ರಹ್ಮಣ್ಯ ಪ್ರದೀಪ ತಿಪ್ಪೇಸ್ವಾಮಿ ಬಂಧಿತ ವ್ಯಕ್ತಿ.

ಪಟ್ಟಣದ ಸುಖಸಾಗರ ಹೊಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ ಹೆಗಡೆಯ ಶಿವಪುರ ನಿವಾಸಿ ಕೃಷ್ಣ ಮಂಜಯ್ಯ ಶೆಟ್ಟಿ ಎಂಬವರ ಮೇಲೆ ಜು. 14 ರಂದು ಮಧ್ಯರಾತ್ರಿ ಆರೋಪಿ ಸುಬ್ರಹ್ಮಣ್ಯ ಹಲ್ಲೆ ಮಾಡಿದ್ದಾನೆ. ಬಳಿಕ ಕಿಸೆಯಲ್ಲಿ ಇದ್ದ 4500 ರೂ. ನಗದು ಮತ್ತು 2 ಮೊಬೈಲ್ ಫೋನ್​ಗಳನ್ನು ದೋಚಿ ಪರಾರಿಯಾಗಿದ್ದ.

ಈ ಕುರಿತು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡ ಸಿಪಿಐ ತಿಮ್ಮಪ್ಪ ನಾಯ್ಕ, ಪಿಎಸ್​ಐ ನವೀನ ಎಸ್. ನಾಯ್ಕ, ಪಿಎಸ್​ಐ ಪದ್ಮಾ ದೇವಳಿ, ಸಿಬ್ಬಂದಿ ಗಣೇಶ ನಾಯ್ಕ, ದಯಾನಂದ ನಾಯ್ಕ, ಗುರು ನಾಯಕ, ಪ್ರದೀಪ ನಾಯಕ, ಶಿವಾನಂದ ಜಾಡರ್ ತಂಡ ಆರೋಪಿಯನ್ನು ಕೃತ್ಯ ನಡೆದ 24 ಗಂಟೆಯಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net