ಲಾರಿ ತಡೆದು ಹಣ ದೋಚಿದ್ದ ಆರೋಪಿಗಳ ಸೆರೆ

23 bdk crime
ಬಂಗಾರಪೇಟೆ ತಾಲೂಕು ಕಾಮಸಮುದ್ರ ಪೊಲೀಸರು ಬಂಧಿತ ಆರೋಪಿಗಳೊಂದಿಗೆ ವಶಪಡಿಸಿಕೊಂಡ ಹಣ ಹಾಗೂ ವಾಹನ.
Published on

ಬಂಗಾರಪೇಟೆ ಗ್ರಾಮಾಂತರ: ಲಾರಿ ತಡೆದು ದರೋಡೆ ಮಾಡಿದ್ದ ಐವರು ಆರೋಪಿಗಳನ್ನು ಕಾಮಸಮುದ್ರ ಪೊಲೀಸರು ಶನಿವಾರ ಬಂಧಿಸಿ ಕಾರು, ಎರಡು ದ್ವಿಚಕ್ರ ವಾಹನ, 4 ಮೊಬೈಲ್​ ಹಾಗೂ 3.11 ಲಕ್ಷ ರೂ. ನಗದು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


ತಮಿಳುನಾಡು ಮೂಲದ ನಾಗೇಶ್​ (25), ಸೈಯದ್​ ಬಾಷ (27), ಜಬೀವುಲ್ಲಾ (25) ಸದ್ದಾಂ ಹಸೇನ್​ (23), ಚಿನ್ನಸ್ವಾಮಿ(29) ಬಂಧಿತರು.


ಜೂ.18ರಂದು ಬಂಗಾರಪೇಟೆಯ ಪಿಆರ್​ಎಸ್​ ಮಿಲ್​ನಲ್ಲಿ ಅಕ್ಕಿ ಲೋಡ್​ ಮಾಡಿಕೊಂಡು ತಮಿಳುನಾಡಿಗೆ 4.34 ಲಕ್ಷ ರೂ. ಹಣದೊಂದಿಗೆ ಹೋಗುತ್ತಿದ್ದ ವೇಳೆ ಕಾಮಸಮುದ್ರ ತೊಪ್ಪನಹಳ್ಳಿ ಮಾರ್ಗದ ದೊಡ್ಡಬೊಂಪಲ್ಲಿ ಗ್ರಾಮದ ಬಳಿ ಕಾರಿನಿಂದ ಲಾರಿ ಹಿಂಬಾಲಿಸಿದ ನಾಲ್ವರು ಡೆವರ್​ ರಾಮಕೃಷ್ಣ (31)ಎಂಬುವವನ ಮೇಲೆ ಹಲ್ಲೆ ಮಾಡಿ ಹಣ ಕಸಿದು ಪರಾರಿಯಾಗಿದ್ದರು. ರಾಮಕೃಷ್ಣಪ್ಪ ಕಾಮಸಮುದ್ರ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಕೆಜಿಎಫ್​ ಎಸ್ಪಿ ಡಾ.ಧರಣಿದೇವಿ ಮತ್ತು ಸಿಪಿಐ ಆನಂದಕುಮಾರ್​ ಮಾರ್ಗದರ್ಶನದಲ್ಲಿ ಪಿಎಸ್​ಐ ವಿಠ್ಠಲ ವೈ. ತಲವಾರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಮತ್ತಿಬ್ಬರು ಆರೋಪಿಗಳಾದ ಹೊಸಪುರ ನಾಗರಾಜ್​ ಮತ್ತು ಮರಗಟ್ಟ ನಾಗರಾಜ್​ ತಲೆಮರೆಸಿಕೊಂಡಿದ್ದಾರೆ.


ಪೊಲೀಸ್​ ಸಿಬ್ಬಂದಿ ಕಾರ್ಯಕ್ಕೆ ಎಸ್ಪಿ ಧರಣಿದೇವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಮಂಜುನಾಥ್​,

ಲಕ್ಷ್ಮಣ್  ತೇಲಿ, ಶಿವಕುಮಾರ್​, ಕೃಷ್ಣ , ರಾಮರಾವ್​ ಮುಂತಾದವರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net