

ಹುಬ್ಬಳ್ಳಿ: ಇಲ್ಲಿಯ ಲಿಂಗರಾಜ ನಗರದಲ್ಲಿ ನಡೆದಿದ್ದ ಆಕಾಶ ವಾಲ್ಮೀಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆನಂದ ನಗರದ ನಿವಾಸಿಗಳಾ ಶಿವರಾಜ ನಿತ್ಯಾನಂದ ಮಿಶ್ರಿಕೋಟಿ, ರೋಹನ ರಾಜು ಬೀಳಗಿ, ವಿನಾಯಕ ದುಂಡೇಶ ಕುಪ್ಪಸಗೌಡ್ರ ಎಂಬುವವರನ್ನು ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಜ. 28ರಂದು ಆಕಾಶ ವಾಲ್ಮೀಕಿ ಎಂಬ ಯುವಕನಿಗೆ ಚಾಕು ಇರಿದು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.