ಶ್ರೀಗಂಧ ಕಳ್ಳರ ಬಂಧನ, ಇಬ್ಬರು ಪರಾರಿ ಸೊತ್ತು ವಶ

web
Published on

ಬಂಟ್ವಾಳ: ರಕ್ಷಿತಾರಣ್ಯದಿಂದ ಲಕ್ಷಾಂತರ ರೂ. ಮೌಲ್ಯದ ಶ್ರೀಗಂಧದ ಮರಗಳನ್ನು ಕಳವು ಮಾಡಿ ಮಾರಾಟ ಮಾಡಲು ಯತ್ನಿಸಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಬಂಟ್ವಾಳ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದು ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಯಾಚರಣೆ ವೇಳೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ. ಪಾತೂರು ನಿವಾಸಿ ಇಬ್ರಾಹಿಂ ಹಾಗೂ ಇರಾ ಗ್ರಾಮದ ಮೊಯ್ದೀನ್ ಬಂಧಿತ ಆರೋಪಿಗಳು. ಸಿದ್ದೀಕ್ ಹಾಗೂ ಕೊರುಂಗು ಸಿದ್ದೀಕ್ ತಲೆಮರೆಸಿಕೊಂಡಿದ್ದಾರೆ.

ಉಡ ರಕ್ಷಣೆ: ರಕ್ಷಿತಾರಣ್ಯದಿಂದ ಶ್ರೀಗಂಧದ ಮರಗಳನ್ನು ಕಡಿದು ಸಾಗಿಸುವ ಪ್ರಯತ್ನದಲ್ಲಿದ್ದ ವೇಳೆ ಅರಣ್ಯಾಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದ ಆರೋಪಿಗಳು ಕಾಡು ಪ್ರಾಣಿ ಉಡವನ್ನು ಹಿಡಿದು ಭಕ್ಷಿಸಲು ತಯಾರಿ ನಡೆಸಿದ್ದು ಬೆಳಕಿಗೆ ಬಂದಿದೆ. ಅರಣ್ಯಾಧಿಕಾರಿಗಳು ಸಕಾಲಿಕ ಕಾಯಾಚರಣೆ ನಡೆಸಿ ಉಡವನ್ನು ರಕ್ಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net