ದರೋಡೆಕೋರರ ಬಂಧನ

Vijayavani-Featured-Image
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಹೊಸ ತೇಗೂರು ಬಳಿ ನಡೆದಿದ್ದ ದರೋಡೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಗರಗ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಿತ್ತೂರಿನ ನವೀನ ಹುಣಶ್ಯಾಳ (34), ಸಂತೋಷ ಬಿಡಿಮಠ (25), ಅಕ್ಷಯ ಕೋಳಿ (19), ಸಾಗರ ಯಲ್ಲಪ್ಪ ಗುಂಜಿ (21), ಮಲ್ಲಾಪುರದ ವಿರೂಪಾಕ್ಷ ಎಮ್ಮಿ (21), ಸಾಗರ ಫಕ್ಕೀರಪ್ಪ ಗುಂಜಿ (31) ಬಂಧಿತರು. ಆರೋಪಿಗಳಿಂದ ದರೋಡೆ ಮಾಡಿದ 25 ಸಾವಿರ ರೂ. ನಗದು, ಕೃತ್ಯಕ್ಕೆ ಬಳಸಿದ ಕಾರು ವಶಪಡಿಸಿಕೊಂಡಿದ್ದಾರೆ.
ಹೊಸ ತೇಗೂರ ಗ್ರಾಮದ ಬಳಿಯ ಗ್ರೀನ್​ ದಾಬಾ ಬಳಿಯ ಹೆದ್ದಾರಿಯಲ್ಲಿ ಆ. 2ರಂದು ರಾತ್ರಿ 8.30ಕ್ಕೆ ದರೋಡೆ ನಡೆದಿತ್ತು. ಈ ಕೃತ್ಯ ಎಸಗಿದ 7 ಜನರ ಪೈಕಿ 6 ಜನರನ್ನು ಭಾನುವಾರ ಬಂಧಿಸಲಾಗಿದೆ. ಎಸ್ಪಿ ಗೋಪಾಲ ಬ್ಯಾಕೋಡ, ಅಡಿಷನಲ್​ ಎಸ್​ಸ್ಪಿ ನಾರಾಯಣ ಭರಮನಿ, ಡಿಎಸ್​ಪಿ ಎಸ್​.ಎಂ. ನಾಗರಾಜ ಮಾರ್ಗದರ್ಶನದಲ್ಲಿ ಸಿಪಿಐ ಸಮೀರ ಮುಲ್ಲಾ ನೇತೃತ್ವದಲ್ಲಿ ಪಿಎಸ್​ಐ ಸಿದ್ದರಾಮಪ್ಪ ಒಳಗೊಂಡ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net