ಅರಣ್ಯಕ್ಕೆ ಬೆಂಕಿ ಇಟ್ಟಿದ್ದ ಒಬ್ಬನ ಬಂಧನ

Published on

ಗುಂಡ್ಲುಪೇಟೆ: ಬಂಡೀಪುರ ಅರಣ್ಯಕ್ಕೆ ಬೆಂಕಿ ಇಟ್ಟಿದ್ದ ಒಬ್ಬ ಆರೋಪಿಯನ್ನು ಅರಣ್ಯ ಇಲಾಖೆ ಬಂಧಿಸಿದ್ದು ತಲೆಮರೆಸಿಕೊಂಡಿರುವ ಮತ್ತಿಬ್ಬರ ಪತ್ತೆಗೆ ಕ್ರಮ ಕೈಗೊಂಡಿದೆ.

ತಾಲೂಕಿನ ಕಳ್ಳೀಪುರ ಗ್ರಾಮದ ನಿವಾಸಿ ಅರುಣ್‌ಕುಮಾರ್ ಎಂಬಾತನನ್ನು ಮಂಗಳವಾರ ಸಂಜೆ ಬಂಧಿಸಿ ಆತನಿಂದ ತೇಗದ ಮರದ ನಾಲ್ಕು ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಈತನೊಂದಿಗೆ ಕಾಡಿಗೆ ತೆರಳಿದ್ದ ಹಗ್ಗದಹಳ್ಳದ ಮತ್ತಿಬ್ಬರು ಆರೋಪಿಗಳ ಬಂಧನಕ್ಕೆ ಅರಣ್ಯ ಇಲಾಖೆ ಶೋಧ ಮುಂದುವರಿಸಿದೆ.

ಕಾಡಿಗೆ ಬೆಂಕಿಹಚ್ಚಿದ ದುಷ್ಕರ್ಮಿಗಳು ಅದನ್ನು ನಂದಿಸಲು ಅರಣ್ಯ ಸಿಬ್ಬಂದಿ ತೆರಳುತ್ತಿದ್ದಂತೆ ತೇಗದ ಮರ ಕಡಿದು ಸಾಗಿಸಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಕಾರ್ಯ ಕೈಗೊಂಡಿದ್ದರು. ಮನೆಯಲ್ಲಿಯೇ ಇದ್ದ ಆರೋಪಿಯನ್ನು ಬಂಧಿಸಿ ತೇಗದ ಮರದ ನಾಲ್ಕು ತುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸಿಎಫ್ ರವೀಂದ್ರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net