ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯ

2
ರಾಜಸ್ಥಾನದಲ್ಲಿ ವಾಲ್ಮೀಕಿ ಸಮುದಾಯದ ರಾಮೇಶ್ವರ ವಾಲ್ಮೀಕಿ ಎಂಬ ಯುವಕನನ್ನು ಅಮಾನುಷವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ಸಫಾಯಿ ಮಜದೂರ್ ಕಾಂಗ್ರೆಸ್ ಸಂಘಟನೆಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಕಾಶಿನಾಥ ಚವ್ಹಾಣ, ರಾಜೇಶ ಬೇನಿವಾಲ್, ಮದನ್ ಡೋಂಗ್ರೆ ಇತರರಿದ್ದರು.
Published on

ಬೆಳಗಾವಿ: ರಾಜಸ್ಥಾನದಲ್ಲಿ ವಾಲ್ಮೀಕಿ ಸಮುದಾಯದ ರಾಮೇಶ್ವರ ವಾಲ್ಮೀಕಿ ಎಂಬ ಯುವಕನನ್ನು ಲಿಕ್ಕರ್ ಮಾಫಿಯಾದವರು ಅಕ್ರಮವಾಗಿ ಬಂಧಿಸಿಟ್ಟು ಅಮಾನುಷವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ಸಫಾಯಿ ಮಜದೂರ ಕಾಂಗ್ರೆಸ್ ಸಂಘಟನೆಯಿಂದ ಜಿಲ್ಲಾಡಳಿತದ ಮೂಲಕ ರಾಜಸ್ಥಾನ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ರಾಜಸ್ಥಾನದ ಜುಂಜುನು ಜಿಲ್ಲೆಯ ಗ್ರಾಮವೊಂದರ 27 ವರ್ಷದ ದಲಿತ ಯುವಕ ರಾಮೇಶ್ವರ ವಾಲ್ಮೀಕಿಯನ್ನು ಅದೇ ಗ್ರಾಮದ ಲಿಕ್ಕರ್ ಮಾಫಿಯಾದ ಗುಂಪು ಅಪಹರಿಸಿ, ಅಜ್ಞಾತ ಸ್ಥಳವೊಂದರಲ್ಲಿ ಕೈಕಾಲುಗಳನ್ನು ಕಟ್ಟಿ, ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ.

ಈ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಗಮನಹರಿಸಬೇಕು. ಲಿಕ್ಕರ್ ಮಾಫಿಯಾದ ರೌಡಿಗಳನ್ನು ಮಟ್ಟಹಾಕುವ ಕೆಲಸವನ್ನು ರಾಜಸ್ಥಾನ ಹಾಗೂ ಕೇಂದ್ರ ಸರ್ಕಾರ ಮೊದಲು ಮಾಡಬೇಕು. ಪರಿಶಿಷ್ಟ ಪಂಗಡದ ಯುವಕನ ಮೇಲೆ ನಿರ್ಭಯವಾಗಿ ಹಲ್ಲೆ ಮಾಡಿ, ಹತ್ಯೆಗೈದವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕೆಂದು ಒತ್ತಾಯಿಸಿದರು. ಕಾಶಿನಾಥ ಚವ್ಹಾಣ, ರಾಜೇಶ ಬೇನಿವಾಲ್, ಮದನ್ ಡೋಂಗ್ರೆ ಹಾಗೂ ಸಂಘಟನೆ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net