

ವಿಜಯಪುರ: ಮೂವರು ಮೋಟರ್ ಸೈಕಲ್ ಕಳ್ಳರನ್ನು ಬಂಧಿಸಿರುವ ಪೊಲೀಸರು ಅವರಿಂದ 8.40 ಲಕ್ಷ ರೂ.ಮೌಲ್ಯದ 19 ಮೋಟರ್ ಸೈಕಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ.
ತಿಕೋಟಾದ ಕುಂಬಾರ ವಸ್ತಿಯ ನಿವಾಸಿ ಶಶಿಕಾಂತ ರಾಜು ಕುಂಬಾರ (22), ಸಿಂದಗಿ ತಾಲೂಕಿನ ರಾಂಪೂರದ ಸತೀಶ ಮಲ್ಲಿಕಾರ್ಜುನ ಕುಂಬಾರ (27) ಹಾಗೂ ತಿಕೋಟಾದ ಭಾವಿಕಟ್ಟಿ ಓಣಿಯ ನಿವಾಸಿ ಸಂಜಯ ಸದಾಶಿವ ಕುಂಬಾರ (28) ಬಂಧಿತ ಆರೋಪಿಗಳು. ಆಲಮಟ್ಟಿಯ ಮೊಘಲ್ ಉದ್ಯಾನ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಬಂಧಿತರು ಒಪ್ಪಿಕೊಂಡಿದ್ದಾರೆಂದು ತಿಳಿಸಿದ್ದಾರೆ.
ಎಎಸ್‌ಪಿ ಶಂಕರ ಮಾರಿಹಾಳ, ಅಪರಾಧ ವಿಭಾಗದ ಎಎಸ್‌ಪಿ ರಾಮನಗೌಡ ಹಟ್ಟಿ, ಬ.ಬಾಗೇವಾಡಿ ಡಿವೈಎಸ್‌ಪಿ ಬಲ್ಲಪ್ಪ ನಂದಗಾಂವಿ, ಸಿಪಿಐ ಶರಣಗೌಡ ಬಿ.ಗೌಡರ, ಪಿಎಸ್‌ಐ ಸೀತಾರಾಮ ಜಿ.ರಾಠೋಡ ಮತ್ತಿತರ ಸಿಬ್ಬಂದಿಯನ್ನೊಳಗೊಂಡ ತಂಡ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸಿದ್ದಾರೆಂದು ಎಸ್‌ಪಿ ಋಷಿಕೇಶ ಸೋನಾವಣೆ ಶ್ಲಾಘಿಸಿದ್ದಾರೆ.