ಚಾಕುವಿನಿಂದ ಇರಿದ ವ್ಯಕ್ತಿಯ ಬಂಧನ

crime
Published on

ಹುಬ್ಬಳ್ಳಿ: ಕ್ಷುಲ್ಲಕ ವಿಚಾರವಾಗಿ 4-5 ಜನ ಸೇರಿ ಒಬ್ಬನಿಗೆ ಚಾಕುವಿನಿಂದ ಇರಿದ ಘಟನೆ ಭಾನುವಾರ ಸಂಜೆ ಹಳೇಹುಬ್ಬಳ್ಳಿಯ ಆನಂದ ನಗರದ ಅರ್ಜುನ ನಗರದಲ್ಲಿ ನಡೆದಿದೆ.
ಆನಂದನಗರ ಶಿವಪುತ್ರ ನಗರದ ವಿನಾಯಕ ಚಿತ್ರಗಾರ (21) ಎಂಬಾತ ಹಲ್ಲೆಗೊಳಗಾಗಿದ್ದಾನೆ. ಸಮೀರ, ಇರ್ಫಾನ್, ದೀಪಕ, ಬಬ್ಲೂ ಮತ್ತಿತರರು ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಹಳೇಹುಬ್ಬಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಂಭೀರವಾಗಿ ಗಾಯಗೊಂಡ ವಿನಾಯಕ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಎಂಟು ದಿನಗಳ ಹಿಂದೆ ವಿನಾಯಕ ಹಾಗೂ ಸಮೀರ ಕುಟುಂಬದ ಮಕ್ಕಳ ನಡುವೆ ಜಗಳವಾಗಿತ್ತು. ಇದೇ ವಿಚಾರಕ್ಕಾಗಿ ಆಕ್ರೋಶಗೊಂಡ ಸಮೀರ ಮತ್ತು ಇತರರು ವಿನಾಯಕನಿಗೆ ಚಾಕುವಿನಿಂದ ಇರಿದಿದ್ದಾರೆ. ಪೊಲೀಸರು ಸಮೀರ್‌ನನ್ನು ಬಂಧಿಸಿದ್ದಾರೆ. ಇನ್ನುಳಿದವರ ಪತ್ತೆ ಮಾಡುತ್ತಿದ್ದಾರೆ. ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net