

ಕಾಸರಗೋಡು: ಮೀಂಜ ಸನಿಹದ ತೊಟ್ಟೆತ್ತೊಡಿಯಲ್ಲಿ ಅಬಕಾರಿ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದವನೊಬ್ಬನನ್ನು ಬಂಧಿಸಲಾಗಿದೆ. ಮೀಂಜ ಚಿಗುರುಪಾದೆ ನಿವಾಸಿ ಪುರಂದರ ಶೆಟ್ಟಿ ಆರೋಪಿಯಾಗಿದ್ದು, ಈತನಿಂದ 16.650 ಲೀ.ಮದ್ಯ ಹಾಗೂ ಸ್ಕೂಟರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.