ಕಬ್ಬಿಣ ಸಾಮಗ್ರಿ ಕಳ್ಳರ ಬಂಧನ

crime
Published on

ಹುಬ್ಬಳ್ಳಿ: ತಾರಿಹಾಳ ಗ್ರಾಮದ ವ್ಯಾಪ್ತಿಯಲ್ಲಿ ನಾಲ್ಕು ಇಂಡಸ್ಟ್ರೀಯಲ್ ಗ್ಯಾರೇಜ್‌ಗಳ ಕಬ್ಬಿಣ ಸಾಮಗ್ರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದು, 4.39 ಲಕ್ಷ ರೂ. ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆ.
ಈ ಹಿಂದೆ 1,39,000 ಕಿಮ್ಮತ್ತಿನ ಕಬ್ಬಿಣದ ಸಾಮಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರ ಕುರಿತು ಪ್ರಕರಣ ದಾಖಲಾಗಿತ್ತು. ಪೊಲೀಸ್ ಇನ್‌ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ ನೇತೃತ್ವದಲ್ಲಿ ದಾಳಿ ನಡೆಸಿ ಉಣಕಲ್‌ನ ಕರಿಯಪ್ಪ ಚಿನ್ನಪ್ಪ ತಳವಾರ, ಸುನೀಲ ಜಂಬಣ್ಣ ಕಟ್ಟಿಮನಿ, ಸಂಗಮೇಶ ಕರಿಗೌಡ ಬಬಲೇಶ್ವರ ಎಂಬುವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net