

ಹುಬ್ಬಳ್ಳಿ: ಅಂತರರಾಜ್ಯ ಕಳ್ಳಿಯನ್ನು ಬಂಧಿಸುವಲ್ಲಿ ನಗರದ ಗೋಕುಲ ರೋಡ್ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ತಮಿಳುನಾಡು ಮೂಲದ ಸಂಧ್ಯಾ ಅಲಿಯಾಸ್ ಶರಣ್ಯಾ ಬಂಧಿತಳು. ಬಂಧಿತಳಿಂದ 9.5 ಲಕ್ಷ ರೂ. ಮೌಲ್ಯದ 139 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಜಪ್ತಿ ಮಾಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಜ. 5ರಂದು ಹೊಸ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ ಜಿಪ್ ತೆರೆದು ಅದರಲ್ಲಿದ್ದ ಬಂಗಾರದ ಆಭರಣಗಳ ಕಳ್ಳತನವಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು, ಅಂತರರಾಜ್ಯ ಕಳ್ಳಿಯನ್ನು ಬಂಧಿಸಿದ್ದಾರೆ.