ಅಂದರ್-ಬಾಹರ್ ಆಡುತ್ತಿದ್ದ ಐವರ ಸೆರೆ

Arrest Kaidhi
Published on

ಶಿರಸಿ: ಇಟಗುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಗದ್ದೆ ಸಮೀಪದ ಹುಣಸೆಹಳ್ಳಿಯ ಅರಣ್ಯ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಆಡುತ್ತಿದ್ದ ಐವರನ್ನು ಗ್ರಾಮೀಣ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಸಿದ್ದಾಪುರ ತಾಲೂಕಿನ ಕಾನಸೂರು ಅಡ್ಕಳ್ಳಿ ಸಮೀಪದ ಮಾನೇನಳ್ಳಿಯ ದತ್ತು ಮಾಬ್ಲು ಗೌಡ (58), ಶಿರಸಿ ತಾಲೂಕಿನ ನೆಗ್ಗು ಸಮೀಪದ ಮಳಲಿಯ ಶ್ರೀಕಾಂತ ಮಾಬ್ಲು ಗೌಡ (38), ಹನುಮಂತಿ ಸಮೀಪದ ಹುಣಸೆಕೊಪ್ಪದ ಗೋಪಾಲ ಹೊನ್ನಾ ಗೌಡ (40), ಮೇಲಿನ ಓಣಿಕೇರಿಯ ಗೋಪಾಲ ರಾಮಾ ನಾಯ್ಕ (58) ಹಾಗೂ ಬಾಳೆಗದ್ದೆ ಸಮೀಪದ ಹುಣಸೆಹಳ್ಳಿಯ ಗೋಪಾಲ ಕೃಷ್ಣಾ ಗೌಡ (36) ಬಂಧಿತರು. ಅಂದರ್ ಬಾಹರ್ ಇಸ್ಪೀಟ್ ಆಟ ಆಡುತ್ತಿದ್ದ ವೇಳೆ ಗ್ರಾಮೀಣ ಠಾಣೆಯ ತನಿಖಾ ಪಿಎಸ್​ಐ ದಯಾನಂದ ಜೋಗಳೇಕರ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿ, ಐವರನ್ನು ಬಂಧಿಸಿದ್ದಾರೆ. ಬಂಧಿತರಿಂದ 5240 ರೂ. ನಗದು, ಆಟದ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net