ರೌಡಿಶೀಟರ್ ಕೊಲೆ ಮಾಡಿದ್ದ ಐವರ ಬಂಧನ

rowdy sheeter murder case
ರೌಡಿಶೀಟರ್ ಮುಜಾಹಿದ್ ಹತ್ಯೆ ಮಾಡಿದ ಆರೋಪಿಗಳನ್ನು ಪೇಪರ್ ಟೌನ್ ಠಾಣೆ ಪೊಲೀಸರು ಬಂಧಿಸಿದರು.
Published on

ಶಿವಮೊಗ್ಗ: ಭದ್ರಾವತಿಯ ಬೊಮ್ಮನಕಟ್ಟೆಯಲ್ಲಿ ಮುಂದೆಯೇ ರೌಡಿಶೀಟರ್ ಮೊಹಮದ್ ಮುಜಾಹಿದ್ ಅಲಿಯಾಸ್ ಮುಜ್ಜುನನ್ನು ಬರ್ಬರವಾಗಿ ಕೊಲೆ ಮಾಡಿದ್ದ ಐವರನ್ನು ಪೇಪರ್‌ಟೌನ್ ಪೊಲೀಸರು ಬಂಧಿಸಿದ್ದಾರೆ.

ಭದ್ರಾವತಿ ತಾಲೂಕು ಹಿರಿಯೂರಿನ ಸಂತೋಷ್‌ಕುಮಾರ್ ಅಲಿಯಾಸ್ ಗುಂಡಾ (33), ಹೊಸಮನೆಯ ಸುರೇಂದ್ರ ಅಲಿಯಾಸ್ ಆಟೋ ಸೂರಿ (36), ಕುವೆಂಪು ನಗರದ ಮಂಜುನಾಥ ಅಲಿಯಾಸ್ ಬಿಡ್ಡಾ (33), ಭೂತನಗುಡಿಯ ವಿಜಯಕುಮಾರ್ ಅಲಿಯಾಸ್ ಪವರ್ (25) ಹಾಗೂ ಬಾರಂದೂರು ಹಳ್ಳಿಕೆರೆಯ ವೆಂಕಟೇಶ್ ಅಲಿಯಾಸ್ ಲೂಸ್ (23) ಬಂಧಿತರು.
ಮೊಹಮದ್ ಮುಜಾಹಿದ್ 2019ರಲ್ಲಿ ರಮೇಶ್ ಎಂಬುವರನ್ನು ಕೊಲೆ ಮಾಡಿ, ಸಂತೋಷ್ ಮತ್ತು ಸುರೇಂದ್ರ ಎಂಬುವರ ಮೇಲೆ ಹಲ್ಲೆ ಮಾಡಿದ್ದ. ಈ ದ್ವೇಷದಿಂಧ ಆರೋಪಿಗಳು ಕಳೆದ ಗುರುವಾರ(ಜು.20) ಬೊಮ್ಮನಕಟ್ಟೆಯ ತನ್ನ ಮನೆ ಮುಂದೆ ನಿಂತಿದ್ದ ಮೊಹಮದ್ ಮುಜಾಹಿದ್‌ನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.
ಮೊಹಮದ್ ಮುಜಾಹಿದ್ ಸಹೋದರ ನೀಡಿದ ದೂರಿನ ಮೇರೆಗೆ ಪೇಪರ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೇಪರ್ ಟೌನ್ ಠಾಣೆ ಪ್ರಭಾರಯ ಪ್ರಭಾರ ಇನ್‌ಸ್ಪೆಕ್ಟರ್ ಗುರುರಾಜ ಮೈಲಾರ್, ಭದ್ರಾವತಿ ನಗರ ವೃತ್ತದ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ನೇತೃತ್ವದಲ್ಲಿ ಪೇಪರ್ ಟೌನ್ ಠಾಣೆಯ ಪಿಎಸ್‌ಐ ಕವಿತಾ, ಎಎಸ್‌ಐ ರತ್ನಾಕರ್, ಮತ್ತು ಸಿಬ್ಬಂದಿ ವೆಂಕಟೇಶ, ವಾಸುದೇವ, ಅರುಣ, ನಾಗರಾಜ, ಎಂ.ಚಿನ್ನಾನಾಯ, ಚನ್ನಕೇಶವ ಹಾಲಪ್ಪ, ಮಂಜುನಾಥ, ಹಣಮಂತ ಅವಟಿ, ಆದರ್ಶ ಶೆಟ್ಟಿ, ವಿಕ್ರಮ್, ಶಿವಪ್ಪ, ಮಂಜುನಾಥ ಮಳೆ, ಮೌನೇಶ, ಈರಯ್ಯ ಮತ್ತು ಎಸ್ಪಿ ಕಚೇರಿ ತಾಂತ್ರಿಕ ಸಿಬ್ಬಂದಿಗಳಾದ ಇಂದ್ರೇಶ್, ಗುರುರಾಜ್, ವಿಜಯ್ ಕುಮಾರ್ ಅವರನ್ನೊಳಗೊಂಡ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net