ಎಂಟು ಜನರ ಬಂಧನ, 3 ಲಕ್ಷ ರೂ. ವಶ

4 Dwd 1
Published on

ಧಾರವಾಡ/ಹುಬ್ಬಳ್ಳಿ: ದುಬೈನಲ್ಲಿ ನಡೆದ ಟಿ- 20 ಕ್ರಿಕೆಟ್ ಪಂದ್ಯಾವಳಿಯ ಸನ್​ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಮೇಲೆ ಅವಳಿ ನಗರದಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಎಂಟು ಜನರನ್ನು ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.

ಧಾರವಾಡದಲ್ಲಿ ಮಾಳಾಪುರದ ಲತೀಫ ಅಬ್ದುಲ್ ರೆಹಮಾನ ತಂಬೋಲಿ, ರಿಯಾಜ್​ಖಾನ್ ಮೆಹಬೂಬಖಾನ್ ರೌಫ್​ಖಾನ್, ರಸೂಲಪುರದ ಇಜಾಜ್​ಅಹ್ಮದ್ ಮಹ್ಮದ್​ಯುುಸೂಫ್ ಮನಿಯಾರ ಹಾಗೂ ಮೆಹಬೂಬನಗರದ ಅಲ್ಲಭಕ್ಷ ಮಹ್ಮದ್​ಹುಸೇನ್ ನವಲೂರ ಎಂಬುವವರನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 40,100 ರೂ. ನಗದು, 3 ಮೊಬೈಲ್​ಫೋನ್ ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ.

ಹುಬ್ಬಳ್ಳಿಯ ಗೋಕುಲ ರಸ್ತೆ ರುದ್ರಗಂಗಾ ಲೇಔಟ್ ಬಳಿ ಹಳೇ ಹುಬ್ಬಳ್ಳಿ ಪ್ರಶಾಂತ ಕಾಲನಿ ನಿವಾಸಿ ಪರಶುರಾಮ ಜಗನ್ನಾಥಸಾ ಲದವಾ ಹಾಗೂ ವಿನಾಯಕ ಮಿಸ್ಕಿನ್ ಎಂಬುವವರನ್ನು ಬಂಧಿಸಿರುವ ಗೋಕುಲ ರೋಡ್ ಠಾಣೆ ಪೊಲೀಸರು, 1,30,000 ರೂ. ನಗದು, 2 ಮೊಬೈಲ್​ಫೋನ್ ಹಾಗೂ 1 ಬೈಕ್ ವಶಪಡಿಸಿಕೊಂಡಿದ್ದಾರೆ.

ಶಕ್ತಿ ಕಾಲನಿ ಜೆಕೆ ಸ್ಕೂಲ್ ಬಳಿ ಬೆಟ್ಟಿಂಗ್ ನಿರತ ಆರೀಫ್ ರೆಹಮತುಲ್ಲಾ ಸಾತೇನಳ್ಳಿ ಹಾಗೂ ವಿಶಾಲ ರಾಜೂಸಾ ಭಾಂಡಗೆ ಎಂಬುವವರನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1,36, 260ರೂ. ನಗದು, 3 ಮೊಬೈಲ್ ಫೋನ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net