ಮಾದಕ ವಸ್ತುಗಳ ಮಾರಾಟಗಾರರ ಬಂಧನ

Vijayavani-Featured-Image
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ 11 ಜನರನ್ನು ವಿದ್ಯಾಗಿರಿ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಜನ್ನತನಗರ ಇರಾನಿ ಕಾಲನಿಯ ಮಹಮ್ಮದ ಫೈರೋಜ್​ ಇರಾನಿ, ಜಾಫರ ರಾಜಾಹುಸೇನ ಇರಾನಿ, ಬಾಬಾಹುಸೇನ ರಾಜಾಹುಸೇನ ಇರಾನಿ, ಜನ್ನತನಗರದ ದಾದಾಪೀರ ಹಂಚಿನಮನಿ, ಬಾಬಾಜಾನ ಮೆಹೆಬೂಬಸಾಬ ಸಂಶಿ, ಪಂಚು ಜೀವನಸಾಬ ಅತ್ತಾರ, ಆಸೀಫ ಮಹಮ್ಮದಗೌಸ್​ ಬೆಟಗೇರಿ, ಸಜ್ಜಾದ ಅಕ್ತರ ಸಯ್ಯದ, ಚಪ್ಪರಬಂದ ಕಾಲನಿಯ ಸಲ್ಮಾನ ಫೈರೋಜ್​ ಕಾಕರ್​, ಶಿವಾನಂದ ನಗರದ ಅಬುಜರ ಶೀರಾಜಿ ಬಾಗರ, ಇಟ್ಟಿಗಟ್ಟಿ ಗ್ರಾಮದ ಪರಮೇಶ್ವರ ರೇವಡಿಹಾಳ ಬಂಧಿತ ವ್ಯಕ್ತಿಗಳು.
ಬಂಧಿತರಿಂದ 1.39 ಕೆಜಿ ಗಾಂಜಾ, 4 ಮೋಬೈಲ್​ ಸೇರಿ ಒಟ್ಟು 1.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net