ಕೇಬಲ್ ಕಳ್ಳರ ಬಂಧನ

arrested
Published on

ಬಿಡದಿ: ಬೆಸ್ಕಾಂಗೆ ಸೇರಿದ ವಿದ್ಯುತ್‌ ಪರಿವರ್ತಕಗಳನ್ನ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 5 ಜನ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಬಿಡದಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ನ.18 ರಂದು ಹೊಸೂರು ಗ್ರಾಮದಲ್ಲಿ ಕುಡಿಯುವ ನೀರಿನ ಬೋರ್ ವೆಲ್ ಗೆ ಅಳವಡಿಕೆ ಮಾಡಲಾಗಿದ್ದ 25 ಕೆವಿಯ ವಿದ್ಯುತ್ ಪರಿವರ್ತಕವನ್ನ ಬಿಚ್ಚಿ ಒಳಗಿದ್ದ ಅಲ್ಯೂಮಿನಿಯಂ ವೈರ್ ಹಾಗೂ ಕಬ್ಬಿಣದ ಕೋರ್ ಗಳನ್ನ ಕಳವು ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 

ಪ್ರಕರಣ ತನಿಖೆಗೆ ಇಳಿದ ಬಿಡದಿ ಠಾಣೆ ಸಿಪಿಐ ಶಂಕರ್ ನಾಯಕ್ ಹಾಗೂ ಸಿಬ್ಬಂದಿಗಳು 5 ಮಂದಿ ಆರೋಪಿಗಳನ್ನ ಬಂಧಿಸಿದ್ದಾರೆ. ಗುರುಪ್ರಸಾದ್, ರವಿ, ಚಿನ್ನಿ, ಮಂಜುನಾಥ್ ನಾಯಕ್, ಮುನಿರಾಜು ಬಂಧಿತ ಆರೋಪಿಗಳಾಗಿದ್ದಾರೆ. 

ಬಂಧಿತ ಆರೋಪಿಗಳ ವಿರುದ್ದ ರಾಜ್ಯದ ವಿವಿಧ 11 ಪೊಲೀಸ್ ಠಾಣೆಗಳಲ್ಲಿ ಇದೆ ವಿದ್ಯುತ್ ಟ್ರಾನ್ಸ್‌‌ ಫಾರ್ಮರ್ ಬಿಚ್ಚಿರುವ ಪ್ರಕರಣಗಳು ದಾಖಲಾಗಿದ್ದವು. ಬಂಧಿತರಿಂದ  ಕೃತ್ಯಕ್ಕೆ ಬಳಸಿದ್ದ 

ಅಶೋಕ ಲೇಲ್ಯಾಂಡ್‌ ಗೂಡ್ಸ್ ವಾಹನ  315 ಕೆ.ಜಿ ಅಲ್ಯೂಮಿನಿಯಂ ಗಟ್ಟಿ ಮತ್ತು 240 ಕೆ.ಜಿ ತೂಕದ ಕಬ್ಬಿಣದ ಬ್ಲೇಡ್‌ ಗಳನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ. 

ಪ್ರಕರಣ ಬೇಧಿಸಿದ ಬಿಡದಿ  ಪೊಲೀಸರನ್ನ ಎಸ್.ಪಿ ಶ್ರೀನಿವಾಸ್ ಗೌಡ ಪ್ರಶಂಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net