ಭೇಟೆ ಆರೋಪಿಗಳ ಬಂಧನ

ಭೇಟೆ ಆರೋಪಿಗಳ ಬಂಧನ
Published on

ಸಿದ್ದಾಪುರ: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಆನೆಚೌಕೂರು ವನ್ಯಜೀವಿ ಪ್ರದೇಶಕ್ಕೆ ಸೇರಿರುವ ಚನ್ನಂಗಿ ಶಾಖೆಯ ದೇವಮಚ್ಚಿ ಮೀಸಲು ಅರಣ್ಯ ಪ್ರದೇಶದಲ್ಲಿ ಹೆಣ್ಣುಕೂರ ಪ್ರಾಣಿಯನ್ನು ಗುಂಡಿಕ್ಕಿದ ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ಮಾಲ್ದಾರೆ ಗ್ರಾಮದ ತಟ್ಟಳ್ಳಿ ಗ್ರಾಮದ ಜೆ.ಎಂ. ಮಂಜು (31), ಪಿರಿಯಾಪಟ್ಟಣ ತಾಲೂಕಿನ ಹಬ್ಬಳತಿ ಗ್ರಾಮದ ಮೋಹನ್(19)ನ್ನು ವಶಕ್ಕೆ ಪಡೆಯಲಾಗಿದೆ. ಚನ್ನಂಗಿ ಹಾಡಿಯ ಜಯಂತ್ ತಲೆ ಮರೆಸಿಕೊಂಡಿದ್ದಾನೆ.

ಕಾರ್ಯಚರಣೆಯಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಕುಮಾರ್ ಚಿಕ್ಕನರಗುಂದ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂಕರಕ್ಷಣಾಧಿಕಾರಿ ಡಿ.ಎಸ್. ದಯಾನಂದ್, ವಲಯ ಅರಣ್ಯಾಧಿಕಾರಿ ಡಿ ದೇವರಾಜು, ಚನ್ನವೀರೇಶ, ವ ಮೋಜಣಿದಾರ, ತಿಮ್ಮಣ್ಣ, ಗಸ್ತು ಅರಣ್ಯ ಪಾಲಕ ಶಿವು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net