

ಹುಬ್ಬಳ್ಳಿ: ದಕ್ಷಿಣಆಫ್ರಿಕಾ ಮತ್ತು ನೆದರಲ್ಯಾಂಡ್ ದೇಶಗಳ ನಡುವೆ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾವಳಿ ವೇಳೆ ನಗರದ ಡಾಕಪ್ಪ ಸರ್ಕಲ್ ಹತ್ತಿರ ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿದ್ದ ಕುಳಗಳ ಮೇಲೆ ಸಿಸಿಬಿ ವಿಭಾಗದ ಪೊಲೀಸರು ಬುಧವಾರ ದಾಳಿ ಮಾಡಿದ್ದಾರೆ.
ಭವಾನಿ ನಗರದ ನವೀನ ಜಿತೂರಿ (28), ಶಾಂತಿನಗರದ ಮಹಮ್ಮದ್ ಅಬ್ದುಲ್ವುಜಿ ಯರಗಟ್ಟಿ (37), ವಿಕಾಸ ನಗರದ ಪವನ್ ತಿಪ್ಪಣ್ಣಸಾ ಇರಕಲ್ (30) ಎಂಬ ಬೆಟ್ಟಿಂಗ್ ಕುಳಗಳನ್ನು ಬಂಧಿಸಿದ್ದು, ಬಂಧಿತರಿಂದ 2,39,620 ರೂ. ನಗದು 25,000 ರೂ. ಮೌಲ್ಯದ ನಾಲ್ಕು ವಿವಿಧ ಕಂಪನಿಯ ಮೊಬೈಲ್ ಫೋನ್ ಸೇರಿದಂತೆ ಒಟ್ಟು 2,64,620 ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಇನ್ಸ್ಪೆಕ್ಟರ್ ಮಾರುತಿ ಗುಳ್ಳಾರಿ ನೇತೃತ್ವದ ತಂಡ ದಾಳಿ ಮಾಡಿದ್ದು, ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.