

ಗಂಗೊಳ್ಳಿ: ಸ್ಕೂಟರ್‌ನಲ್ಲಿ ಅಕ್ರಮ ಗೋ ಮಾಂಸ ಸಾಗಾಟ ಮಾಡುತ್ತಿದ್ದ ಓರ್ವನನ್ನು ಗಂಗೊಳ್ಳಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಗಂಗೊಳ್ಳಿ ಗ್ರಾಮದ ಅಶ್ಫಾಕ್ ಸುಬೇದಾರ್(52) ಬಂಧಿತ. ಗುಜ್ಜಾಡಿ ಗ್ರಾಮದ ನಾಯಕವಾಡಿ ಜಟ್ಟಪ್ಪ ಸರ್ಕಲ್ ಬಳಿ ಉಪನಿರೀಕ್ಷಕ ಹರೀಶ್ ಆರ್. ವಾಹನ ತಪಾಸಣೆ ಮಾಡುತ್ತಿದ್ದಾಗ ಮುಳ್ಳಿಕಟ್ಟೆ ಕಡೆಯಿಂದ ಗಂಗೊಳ್ಳಿ ಕಡೆಗೆ ಸಾಗುತ್ತಿದ್ದ ಆರೋಪಿಯನ್ನು ಪೊಲೀಸರು ತಪಾಸಣೆಗೊಳಪಡಿಸಿದರು. ಈ ಸಂದರ್ಭ ಅಕ್ರಮವಾಗಿ ಗೋ ಮಾಂಸ ಸಾಗಾಟ ಬೆಳಕಿಗೆ ಬಂದಿದೆ. ಸ್ಕೂಟರ್‌ನ ಸೀಟಿನ ಕೆಳಭಾಗದ ಬಾಕ್ಸ್‌ನಲ್ಲಿ 5.8 ಕೆಜಿ ತೂಕದ 3 ಪ್ಲಾಸ್ಟಿಕ್ ಚೀಲಗಳಲ್ಲಿ ಗೋ ಮಾಂಸ ಪತ್ತೆಯಾಗಿದೆ. ಆರೋಪಿ ಅಶ್ಫಾಕ್ ಇತರರ ಜತೆ ಸೇರಿ ಹಸುವನ್ನು ಕಳವುಗೈದು ಅದರ ಮಾಂಸ ಮಾರಾಟ ಮಾಡಲು ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.