ಆಶ್ಪಾಕ್ ಜೋಗನಕೊಪ್ಪ ಬಂಧನ

h18-ashpak joganakoppa
Published on

ಹುಬ್ಬಳ್ಳಿ: ಕಸಬಾಪೇಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಫೊಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಶರಾವತಿ ನಗರದ ಕೆಇಬಿ ಲೇಔಟ್ ನಿವಾಸಿ ಅಶ್ಫಾಕ್ ಜೋಗನಕೊಪ್ಪ(38)ನನ್ನು ಬಂಧಿತ.

ಶರಾವತಿ ನಗರದ ಕೆಇಬಿ ಲೇಔಟ್‌ನಲ್ಲಿ ಸೈಬರ್ ಸೆಂಟತ್ ನಡೆಸುತ್ತಿದ್ದ. ಈ ಆರೋಪಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಾಲಕಿಗೆ ತಂದೆ-ತಾಯಿ ಇಲ್ಲ. ಬಾಲಕಿಗೆ ಹಣ ಹಾಗೂ ಇತರ ವಸ್ತುಗಳ ಆಮಿಷವೊಡ್ಡಿ ಲೈಂಗಿಕವಾಗಿ ಬಳಸಿಕೊಂಡಿರುವುದು ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಪೊಲೀಸ್ ಆಯಕ್ತ ಎನ್. ಶಶಿಕುಮಾರ ತಿಳಿಸಿದ್ದಾರೆ.

ಸದ್ಯ ಆರೋಪಿ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿ, ಹೆಚ್ಚಿನ ವಿಚಾರಣೆಗಾಗಿ ನಮ್ಮ ವಶಕ್ಕೆ ಪಡೆಯಲಾಗಿದೆ. ಆರೋಪಿ ಬಳಸುತ್ತಿದ್ದ ಎಲೆಕ್ಟ್ರಾನಿಕ್ ವಸ್ತುಗಳನ್ನು ಪರಶೀಲಿಸಿದ್ದು, ಇದೇ ರೀತಿ ಇನ್ನೂ ಅನೇಕ ಯುವತಿಯರೊಂದಿಗೆ ಅಶ್ಲೀಲ ವಿಡಿಯೋ, ಫೋಟೋ ತೆಗೆದುಕೊಂಡಿರುವುದು, ಲೈಂಗಿಕ ದೌರ್ಜನ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಕುರಿತು ನೊಂದ ಯುವತಿಯರು ದೂರು ನೀಡಿದರೆ, ತಕ್ಷಣ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಸುದ್ದಿಗಾರರಿಗೆ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net