

ಹಾನಗಲ್ಲ: ತಾಲೂಕಿನ ಅಕ್ಕಿಆಲೂರ ಬಳಿಯ ಜಾನುವಾರು ಮಾರುಕಟ್ಟೆ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ 1.20 ಲಕ್ಷ ರೂ. ಮೌಲ್ಯದ 2.78 ಕೆ.ಜಿ. ಗಾಂಜಾ ವಶಪಡಿಸಿಕೊಂಡ ಘಟನೆ ಭಾನುವಾರ ನಡೆದಿದೆ.
ತಾಲೂಕಿನ ಶಿರಗೋಡ ಗ್ರಾಮದ ಮುಬಾರಕ ಗೌಸಮೊದ್ದೀನ ಮಕಾಂದಾರ, ಹಾನಗಲ್ಲ ಪಟ್ಟಣದ ಮುಕ್ತಿಯಾರ ಮಹದ್ಮಜಾಫರ ಮಕಾಂದರ, ಹಾವೇರಿಯ ಮಹ್ಮದಫಜ್ಜಲ್ ನಿಜಾಮುದ್ದೀನ ಪೆಂಡಾರಿ, ಮಹ್ಮದಸಾಧಿಕ ಅನ್ವರಸಾಬ ಸುಂಕದ ಬಂಧಿತ ಆರೋಪಿಗಳು.
ಇವರು ಜಾನುವಾರು ಕಟ್ಟೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.