ಹೋಂ ಮೇಡ್ ವೈನ್ ಮಾರುತ್ತಿದ್ದವನ ಸೆರೆ

18-GPT-3A
ಗುಂಡ್ಲುಪೇಟೆ ತಾಲೂಕಿನ ಮಾಡ್ರಹಳ್ಳಿ ಸಮೀಪ ಅಕ್ರಮ ಮದ್ಯಸಂಗ್ರಹಿಸಿದ್ದ ಆರೋಪಿಯನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಆರೋಪಿ ಇದ್ದಾನೆ.
Published on

ಗುಂಡ್ಲುಪೇಟೆ: ತಾಲೂಕಿನ ಮಾಡ್ರಹಳ್ಳಿ ಸಮೀಪ ಹೋಂ ಮೇಡ್ ವೈನ್ ಮಾರಾಟದ ಹೆಸರಿನಲ್ಲಿ ಅಕ್ರಮವಾಗಿ ಅಪಾರ ಪ್ರಮಾಣದ ಮದ್ಯ ಸಂಗ್ರಹಿಸಿದ್ದ ವ್ಯಕ್ತಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಸೋಮವಾರ ವಶಕ್ಕೆ ಪಡೆದಿದ್ದಾರೆ. ಬೇಗೂರು ಗ್ರಾಮದ ದಿನೇಶನಾಯ್ಡು ಬಂಧಿತ. ಮಾಡ್ರಹಳ್ಳಿ ಹೊರವಲಯದಲ್ಲಿ ಹೋಂ ಮೇಡ್ ವೈನ್ ಮಾರಾಟ ಮಾಡುವ ಮಳಿಗೆ ಇಟ್ಟುಕೊಂಡಿದ್ದ ದಿನೇಶ್‌ನಿಂದ 3.04 ಲಕ್ಷ ರೂ. ಮೌಲ್ಯದ 750 ಎಂ.ಎಲ್. 380 ಬಾಟಲಿಗಳ ಸಹಿತ ಒಟ್ಟು 285 ಲೀಟರ್ ವೈನ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ಮಂಜನಾಯಕ, ಮುಖ್ಯ ಪೇದೆ ಭಾಸ್ಕರ್, ಪೇದೆಗಳಾದ ಷಣ್ಮುಖ, ಕುಮಾರಸ್ವಾಮಿ, ಸಿದ್ದೇಶ್ ಮತ್ತು ವಾಹನ ಚಾಲಕ ಸೋಮಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net