ಕನಕಪುರ: ಅಪ್ರಾಪ್ತೆಯನ್ನು ವರಿಸಿದ ಆರೋಪದಲ್ಲಿ ಯುವಕನನ್ನು ವಶಕ್ಕೆ ಪಡೆದ ಕೋಡಿಹಳ್ಳಿ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹೊಸದೊಡ್ಡಿ ಗ್ರಾಮದ ನವೀನ್(24) ಬಂಧಿತ. ಪ್ರಕರಣ ಸಂಬಂಧ ಕೋಡಿಹಳ್ಳಿ ಹೋಬಳಿ ಹೊಸದೊಡ್ಡಿಯ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?: ಹೊಸದೊಡ್ಡಿಯ ನವೀನ್, 16 ವರ್ಷದ ಬಾಲಕಿಯನ್ನು ಏ.7ರಂದು ತಮಿಳುನಾಡಿದ ಕೃಷ್ಣಗಿರಿಯ ಬಾಳೆಗುಳಿ ಎಂಬಲ್ಲಿ ಮದುವೆಯಾಗಿದ್ದ. ಆದರೀಗ ಬಾಲಕಿ 5 ತಿಂಗಳ ಗರ್ಭಿಣಿಯಾಗಿದ್ದು, ಮಾಹಿತಿ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೋಡಿಹಳ್ಳಿ ಪೊಲೀಸರಿಗೆ ದೂರು ನೀಡಿದ್ದು, ಈ ಮೇರೆಗೆ ಯುವಕ ಹಾಗೂ ಬಾಲಕಿಯ ತಂದೆ, ತಾಯಿ ಸೇರಿ ಐವರ ವಿರುದ್ಧ ಪೋಕ್ಸೋ ಹಾಗೂ ಬಾಲ್ಯ ವಿವಾಹ ಪ್ರಕರಣ ದಾಖಲಾಗಿದೆ. ವಿವಾಹಕ್ಕೆ ಸಹಕರಿಸಿದ ಹತ್ತಕ್ಕೂ ಹೆಚ್ಚು ಮಂದಿ ವಿರುದ್ಧ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿರುವುದಾಗಿ ಸರ್ಕಲ್ ಇನ್ಸ್ಪೆಕ್ಟರ್ ವಿಕಾಸ್ ತಿಳಿಸಿದ್ದಾರೆ.