ಬಡ್ಡಿದಂಧೆಕೋರನ ಬಂಧನ

crime
Published on

ಹುಬ್ಬಳ್ಳಿ: ಮೈಕ್ರೋ ಫೈನಾನ್ಸ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪದಡಿ ಇಲ್ಲಿಯ ಸೆಟ್ಲಮೆಂಟ್‌ನ ಶರತ್ ಬಿಜವಾಡ ಎಂಬಾತನನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿ ಭಾರತಿ ಕಟ್ಟಿಮನಿ ಅವರು ಶರತ್ ಅವರ ಮೂಲಕ ಮೈಕ್ರೋಫೈನಾನ್ಸ್‌ನಿಂದ ಸಾಲ ಪಡೆದಿದ್ದರು. ಬಡ್ಡಿ ಸಮೇತ ಹಣ ಪಾವತಿಸುತ್ತಿದ್ದರೂ ಹೆಚ್ಚು ಬಡ್ಡಿ ಪಾವತಿಸುವಂತೆ ಕಿರುಕುಳ ನೀಡುತ್ತಿದ್ದ. ಮನೆಗೆ ಬಂದು ಅವಾಚ್ಯವಾಗಿ ನಿಂದಿಸಿ, ಕುಟುಂಬದವರಿಗೂ ಜೀವ ಬೆದರಿಕೆ ಹಾಕಿದ್ದ ಎಂದು ಮಹಿಳೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.

ಯಾವುದೇ ಕಾರಣಕ್ಕೂ ಯಾರೂ ಮೀಟರ್ ಬಡ್ಡಿ, ಬಡ್ಡಿ ವ್ಯವಹಾರ ನಡೆಸುವಂತಿಲ್ಲ. ಸಾಲ ಕೊಟ್ಟವರು ಕಾನೂನುಬದ್ಧವಾಗಿ ಸಾಲ ಮರುಪಾವತಿಸಿಕೊಳ್ಳಬೇಕು. ಯಾರಿಗಾದರೂ ಕಿರುಕುಳ, ಜೀವ ಬೆದರಿಕೆ ನೀಡಿದರೆ, ಕಾನೂನು ಬಾಹಿರವಾಗಿ ವರ್ತಿಸಿದರೆ ಮುಕ್ತವಾಗಿ ದೂರು ನೀಡಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net