

ಹುಬ್ಬಳ್ಳಿ: ನಗರದ ಗುಡ್‌ಶೆಡ್ ರಸ್ತೆ ಹತ್ತಿರ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿಸಿಬಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಹಳೇ ಹುಬ್ಬಳ್ಳಿಯ ಮೊಹ್ಮದ್ ಆಶೀಫ್ ಖಾಜಾ ಮೈನುದ್ದೀನ್ ಅಂಕಲಗಿ (21) ಬಂಧಿತ. ಬಂಧಿತನಿಂದ 80 ಸಾವಿರ ರೂ. ಮೌಲ್ಯದ 800 ಗ್ರಾಂ ಗಾಂಜಾ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.