ಬಾಲಕರೊಂದಿಗೆ ಕಾಮತೃಷೆ ತೀರಿಸಿಕೊಳ್ಳುತ್ತಿದ್ದವನ ಬಂಧನ

crime
Published on

ಹುಬ್ಬಳ್ಳಿ: ಕಾಮ ತೃಷೆಗಾಗಿ ಅಪ್ತಾಪ್ತ ಬಾಲಕರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಲ್ಲದೇ ವಿಡಿಯೋ ಮಾಡಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಗೋಕುಲ ರಸ್ತೆಯ ಹೋಟೆಲೊಂದರಲ್ಲಿ ಕುಕ್ ಆಗಿ ಕೆಲಸ ಮಾಡುತ್ತಿದ್ದ, ಒಡಿಶಾ ಮೂಲದ ಪ್ರಭಂಜನ ಪಾಲ್ ಎಂಬಾತ ಬಂಧಿತ. ಹಣ, ಚಾಕೋಲೆಟ್ ಆಸೆ ತೋರಿಸಿ ಮಕ್ಕಳನ್ನು ಸಿದ್ದಲಿಂಗೇಶ್ವರ ನಗರದ ತನ್ನ ರೂಮಿಗೆ ಕರೆ ತರುತ್ತಿದ್ದ. ಬಹಳಷ್ಟು ಹುಡುಗರನ್ನು ಈ ರೀತಿ ಮಾಡುತ್ತಿದ್ದ ಎಂದು ಆರೋಪಿಸಿ ಸ್ಥಳೀಯರು, ಫ್ರಭಂಜನನನ್ನು ಥಳಿಸಿದ್ದಲ್ಲದೇ ಹಳೇ ಹುಬ್ಬಳ್ಳಿ ಠಾಣೆಗೆ ತಂದು ಒಪ್ಪಿಸಿದ್ದರು. ಪಿಐ ಸುರೇಶ ಯಳ್ಳೂರ ನೇತೃತ್ವದ ತಂಡ ನಡೆಸಿದ ವಿಚಾರಣೆ ವೇಳೆ ಹಲವು ಬಾಲಕರೊಂದಿಗೆ ಹೀಗೆ ನಂಟು ಹೊಂದಿರುವುದನ್ನು ಬಾಯ್ಬಿಟ್ಟಿದ್ದಾನೆ. ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net