7 ದರೋಡೆಕೋರರ ಬಂಧನ

crime logo
Published on

ತರೀಕೆರೆ: ಪಟ್ಟಣ ಹೊರ ವಲಯದ ಅಮೃತಾಪುರ ಕ್ರಾಸ್ ಬಳಿ ದರೋಡೆಗೆ ಯತ್ನಿಸುತ್ತಿದ್ದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಪರಾರಿಯಾಗಿದ್ದಾರೆ.

ಭದ್ರಾವತಿ ಮಹಮ್ಮದ್ ಸಾಬಿತ್ (24), ಜೀಶಾನ್ (20), ಸಲ್ಮಾನ್ ಪಾಷಾ (26), ನೂರುಲ್ಲಾ (21), ಶಾಹಿದ್ (18), ಮನ್ಸೂರ್ (25) ಹಾಗೂ ನಸ್ರುಲ್ಲಾ (21) ಬಂಧಿತ ಆರೋಪಿಗಳು. ಸೋಹೆಲ್ ಮತ್ತು ರೋಷನ್ ಪರಾರಿಯಾಗಿದ್ದಾರೆ.
ಶನಿವಾರ ತಡರಾತ್ರಿ ಅಜ್ಜಂಪುರ ಕ್ರಾಸ್ ಸಮೀಪ ಕಾರಿನಲ್ಲಿ ಬಂದಿದ್ದ ಮುಸುಕುಧಾರಿಗಳು ಮಾರಕಾಸ ಹಿಡಿದು ದರೋಡೆಗೆ ಹೊಂಚುಹಾಕುತ್ತಿದ್ದರು. ಬಂಧಿತರಿಂದ ಒಂದು ನಾಡ ಪಿಸ್ತೂಲ್, 1 ಲಾಂಗು, 3 ದೊಣ್ಣೆ, ರಾಡ್, ಹಗ್ಗ, ಖಾರದ ಪುಡಿ ಹಾಗೂ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸ್‌ಐ ಕೃಷ್ಣನಾಯ್ಕ, ನಾಗೇಂದ್ರನಾಯ್ಕ, ಎಎಸ್‌ಐ ರವಿ, ಪೇದೆಗಳಾದ ಹರೀಶ್, ನಂಜುಂಡಸ್ವಾಮಿ, ರುದ್ರೇಶ್, ರಿಯಾಜ್, ಬಾಬು, ರಫಿಕ್, ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net