

ಹೊನ್ನಾವರ: ಅಕ್ರಮ ಹಾಗೂ ಹಿಂಸಾತ್ಮಕವಾಗಿ 27 ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ತಡೆದ ಮಂಕಿ ಠಾಣೆಯ ಪೊಲೀಸರು ನಾಲ್ವರನ್ನು ಭಾನುವಾರ ಬಂಧಿಸಿದ್ದಾರೆ. ಲಾರಿ ಹಾಗೂ ಜಾನುವಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಮೊಹಮ್ಮದ್ ಇಬ್ರಾಹಿಮ್ ಹಾಸನ, ಮಹಮ್ಮದ್ ತಾಹೀರ್ ಹಾಸನ, ತಾಹೀರ್ ಅಹ್ಮದ್ ಹಾವೇರಿ ಮತ್ತು ಸಮಿವುಲ್ಲಾ ಹಾಸನ ಬಂಧಿತರು. ಲಾರಿ ಮಾಲೀಕ ಮುಬಾರಕ್ ಅಲಿ ಹಾವೇರಿ ವಿರುದ್ಧವೂ ಪ್ರಕರಣ ದಾಖಲಾಗಿದೆ. ಹಾವೇರಿಯಿಂದ ಕೇರಳ ಕಡೆಗೆ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ಆರೋಪಿತರು ಲಾರಿಯಲ್ಲಿ 9 ಎತ್ತು, 7 ಎಮ್ಮೆ, 11 ಕೋಣಗಳನ್ನು ಸಾಗಿಸುತ್ತಿದ್ದರು. ಪ್ರಕರಣ ದಾಖಲಿಸಲಾಗಿದೆ.