ಕಾಡಹಂದಿ ಬೇಟೆಯಾಡಿದ್ದವರ ಬಂಧನ

Published on

ಬುಕ್ಕಾಪಟ್ಟಣ: ಶಿರಾ ತಾಲೂಕು ಬುಕ್ಕಾಪಟ್ಟಣ ಚಿಂಕಾರ ವನ್ಯಜಿವಿಧಾಮದಲ್ಲಿ ವಿದ್ಯುತ್​ ಹರಿಸಿ ಕಾಡು ಹಂದಿ ಬೇಟೆಯಾಡುತ್ತಿದ್ದವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಜಾನಕಲ್​ ಗ್ರಾಮದ ಸೋಮಶೇಖರ್​, ಭೂತರಾಜು, ಶ್ರೀನಿವಾಸ್​, ಶ್ರೀನಿವಾಸಪ್ಪ ಹಾಗೂ ಕುಮಾರ್​ ಬಂಧಿತರು.

ಚಿಂಕಾರ ವನ್ಯಜಿವಿಧಾಮ ವ್ಯಾಪ್ತಿಯ ಜಾನಕಲ್​ ಗ್ರಾಮದಲ್ಲಿ ಕಾಡು ಹಂದಿ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಅರಣ್ಯ ಇಲಾಖೆ ಮಾಹಿತಿ ಲಭ್ಯವಾಗಿತ್ತು. ಅಂತೆಯೇ, ಬುಧವಾರ ಹಂದಿ ಬೇಟೆಯಾಡಿರುವ ಮಾಹಿತಿ ಪಡೆದ ಇಲಾಖೆ ತಿಪಟೂರು ಉಪವಿಭಾಗದ ಸಹಾಯಕ ಅರಣ್ಯ ಸಂರಣಾಧಿಕಾರಿ ಭರತ್​ ತಳವಾರ್​ ಮಾರ್ಗದರ್ಶನದಲ್ಲಿ ಬುಕ್ಕಾಪಟ್ಟಣ ಅರಣ್ಯ ವಲಯದ ವಲಯ ಅಧಿಕಾರಿ ಆರ್​.ಚಂದನ್​ ನೇತೃತ್ವದಲ್ಲಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ವಿದ್ಯುತ್​ ತಂತಿ, ಚೂರಿ, ಚಾಕು ಮೊಬೈಲ್​, ಮರದ ತುಂಡು ಹಾಗೂ ಐದು ಬೈಕ್​ ವಶಪಡಿಸಿಕೊಳ್ಳಲಾಗಿದೆ. ಅರಣ್ಯ ಪಾಲಕರಾದ ರೇವಣಸಿದ್ದಪ್ಪ ಎಸ್​. ಕಾಳಗಿ, ಸುರೇಶ್​, ಹರೀಶ್​ ಹಾಗೂ ಸಿಬ್ಬಂದಿ ಹರೀಶ್​, ಪ್ರಭಾಕರ್​, ನಾಗರಾಜು, ರಾಮಣ್ಣ ಕಾರ್ಯಾಚರಣೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net