ಸುಲಿಗೆಕೋರನ ಬಂಧನ

CRIME-1
Published on

ಕಲಬುರಗಿ: ನಗರದ ಬಿಲಗುಂದಿ ಪೆಟ್ರೋಲ್​ ಪಂಪ್​ ಹತ್ತಿರ ಒಬ್ಬಂಟಿಯಾಗಿ ನಡೆದುಹೋಗುತ್ತಿದ್ದ ಮಹಿಳೆಯ ಚಸ್ಮಾ ಮುರಿದು, ಮೊಬೈಲ್​ ಕಿತ್ತುಕೊಂಡು ಹೋಗಿದ್ದ ಸುಲಿಗೆಕೋರನನ್ನು ನಗರದ ಎಂಬಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಹಾಬಾದ್​ದ ಅಸ್ಮಾಖಾನ್​ ಅವರು ಮೇ ೨೧ರಂದು ಮಧ್ಯಾಹ್ನ ೪.೩೦ಕ್ಕೆ ಬಿಲಗುಂದಿ ಪೆಟ್ರೋಲ್​ ಪಂಪ್​ ಹತ್ತಿರ ನಡೆದು ಹೋಗುವ ವೇಳೆ ತಡೆದು ನಿಲ್ಲಿಸಿ, ಚಸ್ಮಾ ಒಡೆದು ಹಾಕಿ, ಮೊಬೈಲ್​ ಕಿತ್ತುಕೊಂಡು ಹೋಗಲಾಗಿತ್ತು. ಈ ಕುರಿತು ಅಸ್ಮಾಖಾನ್​ ದೂರು ನೀಡಿದ್ದರು. ತನಿಖೆ ಬೆನ್ನು ಹತ್ತಿದ್ದ ಪೊಲೀಸರು ನಗರದ ಮಿಲ್ಲತ್​ ನಗರದ ಮಹ್ಮದ್​ ಅಬ್ಬಾಸ್​ನನ್ನು ಬಂಧಿಸಿದ್ದಾರೆ. ಬಂಧಿತನಿಂದ ಮೊಬೈಲ್​ ಜಪ್ತಿ ಮಾಡಿಕೊಂಡಿದ್ದಾರೆ. ಪಿಐ ಶಿವಾನಂದ ವಾಲಿಕರ್​, ಪಿಎಸ್​ಐ ಚನ್ನವಿರಪ್ಪ, ಎಎಸ್​ಐ ನಜಮೋದ್ದೀನ್​, ಸಿಬ್ಬಂದಿ ಸಿದ್ದಣ್ಣ, ಬೀರಪ್ಪ, ಸಂತೋಷ, ದಸ್ತಯ್ಯ, ಗುರುರಾಜ, ನಾಗರಾಜ, ಚನ್ನಬಸಯ್ಯ, ಸಿದ್ದಣ್ಣ, ವೀರೇಶ ಅವರ ತಂಡ ಕರ‍್ಯಾಚರಣೆ ನಡೆಸಿ, ಬಂಧಿಸಿದ್ದಕ್ಕೆ ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ.ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net