ಸರಗಳ್ಳರ ಬಂಧಿಸಿದ ಪೊಲೀಸರು

arrest dbpura
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ನಗರದ ಕುಚ್ಚಪ್ಪನಪೇಟೆಯಲ್ಲಿ ಮೇ 15ರಂದು ರಾತ್ರಿ ನಡೆದಿದ್ದ ಉಗುಮಬಾಯಿ ಎಂಬುವರ ಸರಗಳ್ಳತನ ಪ್ರಕರಣ ಭೇದಿಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, 130 ಗ್ರಾಂ ಚಿನ್ನದ ಮಾಂಗಲ್ಯಸರ ಹಾಗೂ 2 ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಗೆದ್ದಲಹಳ್ಳಿಯ ಆಟೋ ಚಾಲಕರಾದ ಆರ್.ಸುಬ್ರಹ್ಮಣ್ಯ (24), ಎನ್.ಪ್ರವೀಣ್‌ಕುಮಾರ್ (19), ಹಾಗೂ ಪಾಲನಜೋಗಿಹಳ್ಳಿ ನಿವಾಸಿ ಎನ್.ಅಭಿಲಾಷ್ (19) ಬಂಧಿತ ಆರೋಪಿಗಳು.
ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಅಪರ ಪೊಲೀಸ್ ಅಧೀಕ್ಷಕ ಪುರುಷೋತ್ತಮ್, ಡಿವೈಎಸ್‌ಪಿ ನಾಗರಾಜ್ ಮಾರ್ಗದರ್ಶನದಲ್ಲಿ ನಗರಠಾಣೆ ಇನ್‌ಸ್ಪೆಕ್ಟರ್ ಪ್ರೀತಂ ಶ್ರೇಯಕರ ಮತ್ತು ಅಪರಾಧ ವಿಭಾಗದ ಸಬ್‌ಇನ್‌ಸ್ಪೆಕ್ಟರ್ ನಂಜುಂಡಯ್ಯ ನೇತೃತ್ವದ ಸಿಬ್ಬಂದಿ ಪಾಂಡುರಂಗ, ಕರಾರ್ ಹುಸೇನ್, ವಸಂತಕುಮಾರ್, ಸುನಿಲ್ ಭಾಸಗಿ, ಹುಸೇನ್ ಸಾಭ್ ಕಂಕುರಿ, ಯೋಗಶ್ರೀ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net