ಹಲ್ಲೆ ನಡೆಸಿದ ಎಲ್ಲರನ್ನು ಬಂಧಿಸಲಿ: ಆಗ್ರಹ

03 Jaggu 1
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 33;
Published on

ಬೆಳಗಾವಿ: ಹುಕ್ಕೇರಿ ತಾಲೂಕಿನ ಇಂಗಳಿಯಲ್ಲಿ ಗೋರಕರ ಮೇಲೆ ನಡೆದ ಹಲ್ಲೆ ಖಂಡಿಸಿ ಸಾವಿರಾರು ಶ್ರೀರಾಮಸೇನೆ ಕಾರ್ಯಕರ್ತರು ಬೆಳಗಾವಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಗುರುವಾರ ಪ್ರತಿಭಟನಾ ರ್ಯಾಲಿ ನಡೆಸಿದರು. ಇಂಗಳಿ ಚಲೋ ರ್ಯಾಲಿ ಕೈಗೊಂಡಿದ್ದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಮಾತಿನ ಚಕಮಕಿ ಉಂಟಾಗಿ, ಪ್ರಮೋದ ಮುತಾಲಿಕ ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.

ಇದಕ್ಕೂ ಮೊದಲು ಮಾತನಾಡಿದ ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯ ಪ್ರಮೋದ ಮುತಾಲಿಕ, ಗೋವು ಸಮಾಜಕ್ಕೆ ಹಲವು ಕೊಡುಗೆ ನೀಡುತ್ತದೆ. ಗೋಹತ್ಯೆ ಮಾಡುವುದು ಸರಿಯಲ್ಲ. ಗೋವಿನ ಶಾಪ ಅತಿಕೆಟ್ಟದು, ಗೋರಕರ ಮೇಲೆ ಹಲ್ಲೆ ಮಾಡಿದ ಪ್ರಕರಣ ವಾಪಸ್​ ಪಡೆದರೆ, ಜನರು ಕಾಂಗ್ರೆಸ್​ ನಾಯಕರನ್ನು ಅದೇ ಮರಕ್ಕೆ ಕಟ್ಟಿ ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ವೋಟಿಗಾಗಿ ಇವರನ್ನು ಬಚಾವ್​ ಮಾಡಿದರೆ, ಸರ್ಕಾರಕ್ಕೇ ತಿರುಗು ಬಾಣವಾಗುತ್ತದೆ. ಇಂಗಳಿ ಟನೆ ವೈರಸ್​ ಮಾದರಿಯಲ್ಲಿ ಹರಡುವ ಮೊದಲು ಸರ್ಕಾರ ಎಚ್ಚರ ವಹಿಸಬೇಕು. ಸಾಂಕೇತಿಕವಾಗಿ ಇಂಗಳಿಗೆ ಹೋಗಲು ಸಿದ್ಧರಾಗಿದ್ದೇವೆ ಎಂದರು.

ಇಂಗಳಿಯಲ್ಲಿ ಗೋರಕರ ಮೇಲೆ ಹಲ್ಲೆ ನಡೆಸಿದ ಎಲ್ಲರನ್ನು ಬಂಧಿಸಲೇಬೇಕು. ಸೌಹಾರ್ದತೆಯ ಮಾತು ಹೇಳುವವರೂ ಹಲ್ಲೆ ನಡೆದಾಗ ಎಲ್ಲಿದ್ದರು? ಈ ಎಂದು ಪ್ರಶ್ನಿಸಿದರು. ಶ್ರೀರಾಮಸೇನೆ ರಾಜ್ಯಾಧ್ಯ ಗಂಗಾಧರ ಕುಲಕರ್ಣಿ ಮಾತನಾಡಿ, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮತ್ತು ಗೋ ರಣಾ ಕಾನೂನು ಇದ್ದರೂ ಗೋವುಗಳ ಸಾಗಾಟ, ಹತ್ಯೆ ನಿರಂತರವಾಗಿದೆ. ಇದನ್ನ ತಡೆಯಲು ಹೋದ ಗೋರಕರಿಗೆ ಪೊಲೀಸರು ಹೆದರಿಸುತ್ತಿದ್ದಾರೆ. ಎಲ್ಲೆ ರಾಜ್ಯದಲ್ಲಿ ಗೋ ಸಾಗಣೆ ಕಂಡು ಬಂದರೆ, ಪೊಲೀಸ್​ ಠಾಣೆಗೆ ಮಾಹಿತಿ ನೀಡಿ, ಪೊಲೀಸರು ಬರದಿದ್ದರೆ, ಶ್ರೀರಾಮಸೇನೆ ಕಾರ್ಯಕರ್ತರಿಗೆ ತಿಳಿಸಿ. ಗೋರಣೆಗಾಗಿ ಶ್ರೀರಾಮಸೇನೆ ಬೀದಿಗಿಳಿಯಲು ಸಿದ್ಧ. ಗೋರಣೆ ಮಾಡದಿದ್ದರೆ, ಸರ್ಕಾರಕ್ಕೆ ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶ್ರೀರಾಮಸೇನಾ ಪ್ರಮುಖ ರವಿಕುಮಾರ್​ ಕೋಕಿತಕರ ಮಾತನಾಡಿ, ಹುಕ್ಕೇರಿ ತಾಲೂಕಿನ ಇಂಗಳಿಯಲ್ಲಿ ಗೋರಕರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಹಲ್ಲೆ ಮಾಡಿದ ಎಲ್ಲರನ್ನು ಬಂಧಿಸಬೇಕು. ಬಹುಸಂಖ್ಯೆ ಹಿಂದುಗಳಿರುವ ಭಾರತದಲ್ಲಿ ಹಿಂದುಗಳ ಹತ್ಯೆ, ಹಿಂದುಗಳ ಮೇಲೆ ಹಲ್ಲೆ ಪ್ರಕರಣ, ಬಂಧನಗಳಂತಹ ಅನ್ಯಾಯದ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಕೃತ್ಯಗಳು ಸಂಪೂರ್ಣ ಹೋಗಬೇಕು ಎಂದರು. ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಶ್ರೀರಾಮಸೇನೆ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net