ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

PTR_9 AUG_6
Published on

ಪುತ್ತೂರು: ನಗರ ಠಾಣೆಯಲ್ಲಿ ೨೦೧೭ರಲ್ಲಿ ದಾಖಲಾದ ಆರ್ಮ್ಸ್ ಆಕ್ಟ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಽಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕೇರಳ ತ್ರಿಶೋರ್ ಜಿಲ್ಲೆಯ ನಿವಾಸಿ ಇಲಿಯಾಸ್ ಪಿ.ಎ ಎಂಬಾತ ಬಂಧಿತ. ಈತನ ವಿರುದ್ಧ ಪುತ್ತೂರು ನಗರ ಠಾಣೆ, ಉಪ್ಪಿನಂಗಡಿ ಠಾಣೆ, ಧರ್ಮಸ್ಥಳ ಠಾಣೆಗಳಲ್ಲಿ ಪ್ರಕರಣಗಳಿದ್ದು, ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯಲ್ಲಿ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಸುಮಾರು ೨೦ ಪ್ರಕರಣಗಳು ದಾಖಲಾಗಿವೆ.

ಪುತ್ತೂರು ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಅರುಣ್ ನಾಗೇಗೌಡ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕ ಕೌಶಿಕ್ ನೇತೃತ್ವದಲ್ಲಿ ಸಿಬ್ಬಂದಿ ಪ್ರಶಾಂತ್ ರೈ, ಗಣೇಶ್, ಮ್ಯಾಥ್ಯೂ ವರ್ಗೀಸ್, ಶ್ರೀಶೈಲ ಎಂ.ಕೆ ಒಳಗೊಂಡ ವಿಶೇಷ ತಂಡ ಕೇರಳದಲ್ಲಿ ದಸ್ತಗಿರಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net