ಪುತ್ತೂರು: ವಿಚಾರಣೆಗೆ ಹಾಜರಾಗದೆ ೫ ವರ್ಷಗಳಿಂದ ತಲೆಮರೆಸಿಕೊಂಡಿದ್ದಾತನನ್ನು ವಾರಂಟ್ ಹಿನ್ನೆಲೆಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಹಾಸನ ಬೇಲೂರು ಮೂಲದ ಔರಾನ್ ಯಾನೆ ರಿಯಾಜ್(೩೩) ಬಂಧಿತ. ಪುತ್ತೂರು ನಗರ ಠಾಣೆಯಲ್ಲಿ ೨೦೧೭ರಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಿಸಿ ೫ ವರ್ಷಗಳಿಂದ ತಲೆಮರೆಸಿಕೊಂಡಿದ್ದ. ನ್ಯಾಯಾಲಯ ವಾರಂಟ್ ಹೊರಡಿಸಿದ ಹಿನ್ನೆಲೆಯಲ್ಲಿ ಜುಲೈ ೨೪ರಂದು ಉಪ್ಪಿನಂಗಡಿ ಠಾಣಾ ಪೊಲೀಸ್ ಉಪನಿರೀಕ್ಷಕ ಕೌಶಿಕ್ ನೇತೃತ್ವದಲ್ಲಿ ಬಂಧಿಸಲಾಗಿದೆ. ಸಿಬ್ಬಂದಿಗಳಾದ ಪ್ರಶಾಂತ್ ರೈ, ಶ್ರೀಶೈಲ ಎಂ.ಕೆ., ಮಹಮ್ಮದ್ ಮೌಲಾನಾ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.